ADVERTISEMENT

ಬಿಹಾರದಲ್ಲಿ ದಾಖಲೆಯ ಮತದಾನ; ಪ್ರಜಾಪ್ರಭುತ್ವದ ಗೆಲುವು: CEC ಜ್ಞಾನೇಶ್ ಕುಮಾರ್

ಪಿಟಿಐ
Published 7 ನವೆಂಬರ್ 2025, 2:13 IST
Last Updated 7 ನವೆಂಬರ್ 2025, 2:13 IST
<div class="paragraphs"><p>ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್</p></div>

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

   

ನವದೆಹಲಿ: ಬಿಹಾರದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಪ್ರಜಾಪ್ರಭುತ್ವದ ಗೆಲುವು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

‘ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೂನ್ಯ ಮೇಲ್ಮನವಿ ಸಲ್ಲಿಕೆಯಾಗಿದೆ. ಇದರ ಜತೆಗೆ 1951ರಿಂದ ಮೊದಲ ಬಾರಿ ಅತಿ ಹೆಚ್ಚು ಮತದಾನವಾಗಿದೆ. ಪರಿಪೂರ್ಣ ಮತದಾರರ ಪಟ್ಟಿ ಮತ್ತು ಮತದಾರರ ಉತ್ಸಾಹಭರಿತ ಭಾಗವಹಿಸುವಿಕೆ, ಪಾರದರ್ಶಕ ಚುನಾವಣಾ ಯಂತ್ರಗಳ ಮೂಲಕ ಪ್ರಜಾಪ್ರಭುತ್ವ ಗೆಲ್ಲುತ್ತದೆ. ಇದು ಆಯೋಗಕ್ಕೆ ಅದ್ಭುತ ಪ್ರಯಾಣವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

243 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಶೇ 65ರಷ್ಟು (ಶೇ 64.66) ಮತದಾನವಾಗಿದೆ.

ಈ ಹಿಂದೆ 2020ರಲ್ಲಿ ಕೋವಿಡ್‌ ವೇಳೆ ನಡೆದ ಚುನಾವಣೆಯಲ್ಲಿ ಶೇ 57.29ರಷ್ಟು ಮತದಾನ ನಡೆದಿತ್ತು. 2000ರಲ್ಲಿ ಅತಿ ಹೆಚ್ಚು ಶೇ 62.57 ಮತದಾನ ನಡೆದಿತ್ತು ಎಂದು ವರದಿಯಾಗಿದೆ.

ಇನ್ನುಳಿದ 122 ಕ್ಷೇತ್ರಗಳಿಗೆ ನ.11ರಂದು ಚುನಾವಣೆ ನಡೆಯಲಿದ್ದು ನ.14ರಂದು ಮತಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.