ADVERTISEMENT

Bihar | ಬಿಜೆಪಿ ಅಭ್ಯರ್ಥಿ ಎದುರು ಗೆದ್ದು ಕ್ಷೇತ್ರ ಉಳಿಸಿಕೊಂಡ ತೇಜಸ್ವಿ ಯಾದವ್‌

ಪಿಟಿಐ
Published 14 ನವೆಂಬರ್ 2025, 14:02 IST
Last Updated 14 ನವೆಂಬರ್ 2025, 14:02 IST
ತೇಜಸ್ವಿ ಯಾದವ್‌
ತೇಜಸ್ವಿ ಯಾದವ್‌   

ಪಟ್ನಾ: ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಆರ್‌ಜೆಡಿಯ ತೇಜಸ್ವಿ ಯಾದವ್‌ ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

ರಾಘೋಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ತೇಜಸ್ವಿ, ಎದುರಾಳಿ ಬಿಜೆಪಿ ಅಭ್ಯರ್ಥಿ ಸತೀಶ್‌ ಕುಮಾರ್‌ ವಿರುದ್ಧ 14,532 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ತೇಜಸ್ವಿ ಯಾದವ್‌ ಒಟ್ಟು 1,18,597 ಮತಗಳನ್ನು ಪಡೆದಿದ್ದಾರೆ. ಸತೀಶ್‌ ಕುಮಾರ್‌ 1,04,065 ಮತಗಳನ್ನು ಪಡೆದಿದ್ದಾರೆ. ಸ್ವತಂತ್ರ ಅಭ್ಯರ್ಥಿ ಬಲಿರಾಮ್ ಸಿಂಗ್‌ 3,086 ಮತಗಳನ್ನು ಗಳಿಸಿದ್ದಾರೆ.

ADVERTISEMENT

ತೇಜಸ್ವಿ ಯಾದವ್‌ ಕಳೆದ 10 ವರ್ಷಗಳಿಂದ ರಾಘೋಪುರ ಸ್ಥಾನವನ್ನು ಹೊಂದಿದ್ದಾರೆ. 2015 ಮತ್ತು 2020 ರ ವಿಧಾನಸಭಾ ಚುನಾವಣೆಯಲ್ಲಿ ಸತೀಶ್ ಕುಮಾರ್ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.