ADVERTISEMENT

Bihar Elections: 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎಂಐಎಂ

ಪಿಟಿಐ
Published 19 ಅಕ್ಟೋಬರ್ 2025, 9:01 IST
Last Updated 19 ಅಕ್ಟೋಬರ್ 2025, 9:01 IST
ಅಸಾದುದ್ದೀನ್‌ ಓವೈಸಿ
ಅಸಾದುದ್ದೀನ್‌ ಓವೈಸಿ   

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು 25 ಅಭ್ಯರ್ಥಿಗಳ ಪಟ್ಟಿಯನ್ನು ಇಂದು (ಭಾನುವಾರ) ಬಿಡುಗಡೆಗೊಳಿಸಿದೆ.

ಇಬ್ಬರು ಮುಸ್ಲಿಮೇತರ ಅಭ್ಯರ್ಥಿಗಳಿಗೂ ಟಿಕೆಟ್ ನೀಡಲಾಗಿದೆ.

'ಇಂಡಿಯಾ' ಮೈತ್ರಿಕೂಟ ಕಡೆಗಣಿಸಿರುವ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷವು, ಒಟ್ಟು 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.

ADVERTISEMENT

ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಹಾಗೂ ರಾಜ್ಯದಲ್ಲಿನ ಏಕಮಾತ್ರ ಶಾಸಕರಾಗಿರುವ ಅಖ್ತರುಲ್ ಇಮಾನ್, ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೊಳಿಸಿದ್ದಾರೆ.

ಹಾಲಿ ಶಾಸಕ ಇಮಾನ್, ಅಮೌರ್ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 19 ಸ್ಥಾನಗಳಲ್ಲಿ ಸ್ಪರ್ಧಿಸಿ ಐದರಲ್ಲಿ ಗೆಲುವು ಸಾಧಿಸಿತ್ತು. ಆದರೆ ಬಳಿಕ ನಾಲ್ವರು ಶಾಸಕರು ಆರ್‌ಜೆಡಿಗೆ ಪಕ್ಷಾಂತರಗೊಂಡಿದ್ದರು.

ಈ ಬಾರಿ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಐಎಂಐಎಂ ಉತ್ಸುಕತೆ ವ್ಯಕ್ತಪಡಿಸಿತ್ತು. ಈ ಸಂಬಂಧ ತೇಜಸ್ವಿ ಯಾದವ್‌ಗೆ ಪತ್ರ ಬರೆದಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.