ಬಿಹಾರ ಚುನಾವಣೆ
(ಚಿತ್ರ ಕೃಪೆ: X/@ECISVEEP)
ನವದೆಹಲಿ: ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು (ಸೋಮವಾರ) ಪ್ರಕಟಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ 121 ಹಾಗೂ ಎರಡನೇ ಹಂತದಲ್ಲಿ 122 ವಿಧಾನಸಭೆ ಸ್ಥಾನಗಳಲ್ಲಿ ಮತದಾನ ನಡೆಯಲಿದೆ.
ಅಕ್ಟೋಬರ್ 10ರಂದು ಮೊದಲನೇ ಹಂತಕ್ಕೆ ಹಾಗೂ ಅಕ್ಟೋಬರ್ 13ರಂದು ಎರಡನೇ ಹಂತಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 (ಮೊದಲನೇ ಹಂತ) ಹಾಗೂ ಅಕ್ಟೋಬರ್ 20 (ಎರಡನೇ ಹಂತ) ಕೊನೆಯ ದಿನಾಂಕವಾಗಿದೆ.
ಬಿಹಾರ ಚುನಾವಣೆಯ ಮುಖ್ಯಾಂಶಗಳು:
243 ವಿಧಾನಸಭೆ ಕ್ಷೇತ್ರ
ಒಟ್ಟು ಮತದಾರರು: 7.43 ಕೋಟಿ
ಹೊಸ ಮತದಾರರು: 14 ಲಕ್ಷ
ಮತಗಟ್ಟೆಗಳು: 90,712
ಅಧಿಸೂಚನೆ ಪ್ರಕಟ:
ಮೊದಲನೇ ಹಂತ: ಅಕ್ಟೋಬರ್ 10
ಎರಡನೇ ಹಂತ: ಅಕ್ಟೋಬರ್ 13
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ:
ಮೊದಲನೇ ಹಂತ: ಅಕ್ಟೋಬರ್ 17
ಎರಡನೇ ಹಂತ: ಅಕ್ಟೋಬರ್ 20
ನಾಮಪತ್ರಗಳ ಪರಿಶೀಲನೆ:
ಮೊದಲನೇ ಹಂತ: ಅಕ್ಟೋಬರ್ 18
ಎರಡನೇ ಹಂತ: ಅಕ್ಟೋಬರ್ 21
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ:
ಮೊದಲನೇ ಹಂತ: ಅಕ್ಟೋಬರ್ 20
ಎರಡನೇ ಹಂತ: ಅಕ್ಟೋಬರ್ 23
ಮತದಾನ:
ಮೊದಲನೇ ಹಂತ: ನವೆಂಬರ್ 6
ಎರಡನೇ ಹಂತ: ನವೆಂಬರ್ 11
ಫಲಿತಾಂಶ: ನವೆಂಬರ್ 14
ಚುನಾವಣಾ ಆಯೋಗದ ಸಂಪೂರ್ಣ ವಿಡಿಯೊ ಇಲ್ಲಿ ವೀಕ್ಷಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.