ADVERTISEMENT

ರಾಜ್ಯದಲ್ಲಿ ತಯಾರಾದ ಉತ್ಪನ್ನ ಮಾತ್ರ ಖರೀದಿಸಿ, ಬಳಸಿ: ಬಿಹಾರ ಸಚಿವ

ಐಎಎನ್ಎಸ್
Published 23 ಆಗಸ್ಟ್ 2022, 6:35 IST
Last Updated 23 ಆಗಸ್ಟ್ 2022, 6:35 IST
ಸಚಿವ ಸಮೀರ್ ಮಹಾಸೇತ್
ಸಚಿವ ಸಮೀರ್ ಮಹಾಸೇತ್    

ಪಟ್ನಾ: ಬಿಹಾರದ ಜನತೆ ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾತ್ರ ಬಳಸಿ, ಹೊರರಾಜ್ಯಗಳ ಉತ್ಪನ್ನ ಬಳಕೆ ಕಡಿಮೆ ಮಾಡಿ ಎಂದು ಉದ್ಯಮ ಸಚಿವ ಸಮೀರ್ ಮಹಾಸೇತ್ ಹೇಳಿದ್ದಾರೆ.

ಹಾಜಿಪುರದಲ್ಲಿ ಆಹಾರ ಉತ್ಪನ್ನಗಳ ತಯಾರಿಕಾ ಘಟಕ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಉತ್ಪನ್ನಗಳನ್ನೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿ ಎಂದು ಕರೆ ನೀಡಿದ್ದಾರೆ.

ರಾಜ್ಯದಲ್ಲೇ ತಯಾರಾಗುವ ಉತ್ಪನ್ನ ಖರೀದಿಯಿಂದ, ಜಿಎಸ್‌ಟಿ ಸಂಗ್ರಹಕ್ಕೂ ಪ್ರಯೋಜನ ದೊರೆಯಲಿದೆ. ಅಲ್ಲದೆ, ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಸಚಿವರು ಹೇಳಿದ್ದಾರೆ.

ADVERTISEMENT

ನಾವು ಹೊರರಾಜ್ಯಗಳಲ್ಲಿ ತಯಾರಾದ ಉತ್ಪನ್ನ ಖರೀದಿಸಿದರೆ, ಅದರ ಆದಾಯ ಅಲ್ಲಿನವರಿಗೆ ಹೋಗಲಿದೆ. ಅದರ ಬದಲು, ಇಲ್ಲಿನ ಉತ್ಪನ್ನ ಖರೀದಿಯಿಂದ, ರಾಜ್ಯಕ್ಕೆ ಆದಾಯ, ಜಿಎಸ್‌ಟಿ ಸಂಗ್ರಹವಾಗಲಿದೆ. ಇದರಿಂದ ಬಿಹಾರ ರಾಜ್ಯಕ್ಕೆ ಪ್ರಯೋಜನವಾಗುತ್ತದೆ ಎಂದು ಸಚಿವ ಸಮೀರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.