ನಿತೀಶ್ ಕುಮಾರ್
– ಪಿಟಿಐ ಚಿತ್ರ
ಪಟ್ನಾ: ‘ಬಿಹಾರ್ ಪತ್ರಕಾರ್ ಸಮ್ಮಾನ್’ ಯೋಜನೆಯಡಿ ರಾಜ್ಯದ ನಿವೃತ್ತ ಪತ್ರಕರ್ತರ ಪಿಂಚಣಿಯನ್ನು ಮಾಸಿಕ ₹9,000 ಹೆಚ್ಚಿಸಿರುವುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಘೊಷಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ನೋಂದಾಯಿತ ಅರ್ಹ ನಿವೃತ್ತ ಪತ್ರಕರ್ತರಿಗೆ ಇನ್ನು ಮುಂದೆ ತಿಂಗಳಿಗೆ ₹15,000 ಪಿಂಚಣಿ ದೊರೆಯಲಿದೆ. ಅದು ಈ ಹಿಂದೆ ₹6,000 ಇತ್ತು ಎಂದು ಅವರು ಹೇಳಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
‘ಅರ್ಹ ನಿವೃತ್ತ ಪತ್ರಕರ್ತರ ಮಾಸಿಕ ಪಿಂಚಣಿಯನ್ನು ₹6,000ದಿಂದ ₹15,000ಕ್ಕೆ ಏರಿಸುವಂತೆ ಸೂಚನೆ ನೀಡಲಾಗಿದೆ ಎಂಬುದನ್ನು ತಿಳಿಸಲು ಸಂತಸವಾಗುತ್ತಿದೆ’ ಎಂದು ನಿತೀಶ್ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘ನಿವೃತ್ತ ಪರ್ತಕರ್ತರ ನಿಧನದ ಬಳಿಕ ಅವರ ಪತ್ನಿ/ಪತಿಗೆ ದೊರೆಯುತ್ತಿದ್ದ ಮಾಸಿಕ ಪಿಂಚಣಿಯ ಮೊತ್ತವನ್ನು ₹ 3,000ದಿಂದ ₹ 10,000ಕ್ಕೆ ಹೆಚ್ಚಿಸಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.