ADVERTISEMENT

ಬಿಹಾರ: ಶಾಸಕ ಸಂಜಯ್‌ ತಿವಾರಿ ಕಾರಿನಲ್ಲಿ ಮದ್ಯ ಸಾಗಾಟ, ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 14 ಮೇ 2020, 1:10 IST
Last Updated 14 ಮೇ 2020, 1:10 IST
ಎಎನ್‌ಐ ಟ್ವಿಟರ್‌ ಚಿತ್ರ
ಎಎನ್‌ಐ ಟ್ವಿಟರ್‌ ಚಿತ್ರ    

ಪಟ್ನಾ: ಬಕ್ಸರ್‌ ಶಾಸಕ ಸಂಜಯ್‌ ಕೆ.ಆರ್‌. ತಿವಾರಿ ಅವರ ಕಾರನ್ನು ತಪಾಸಣೆ ನಡೆಸಿರುವ ಪೊಲೀಸರು ಮದ್ಯ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

‘ನಾಲ್ಕು ಜನರಿದ್ದ ಕಾರನ್ನು ತಪಾಸಣೆ ನಡೆಸಿದ್ದೇವೆ. ವಾಹನ್‌ ಆ್ಯಪ್‌ ಪರಿಶೀಲಿಸಿದ ಬಳಿಕ ಕಾರು ಶಾಸಕರದ್ದು ಎಂದು ತಿಳಿದು ಬಂದಿದೆ. ಶಾಸಕರು ಸೇರಿದಂತೆ ಐದು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇವೆ’ ಎಂದು ಬಕ್ಸೂರ್‌ ಎಸ್ಪಿ ಉಪೇಂದ್ರನಾಥ್‌ ಶರ್ಮಾ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸಂಜಯ್‌ ತಿವಾರಿ, ‘ನನ್ನ ಕಾರಿನಲ್ಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಕಾರನ್ನು ಜಗದೀಶ್‌ಪುರದಲ್ಲಿ ಪಡಿತರ ವಿತರಿಸಲು ತೆಗೆದುಕೊಂಡು ಹೋಗಲಾಗಿತ್ತು. ಕಾರಿನಲ್ಲಿ ಮದ್ಯ ಪತ್ತೆಯಾಗಿರುವುದು ನನಗೂ ಆಶ್ಚರ್ಯವಾಗಿದೆ. ಇನ್ನಷ್ಟೆ ಪಡಿತರ ವಿತರಿಸಲು ಹೋದ ಕಾರ್ಮಿಕರನ್ನು ವಿಚಾರಿಸುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.