ADVERTISEMENT

ಮತದಾರರ ಪಟ್ಟಿಗೆ ‘ಆಧಾರ್‌’ ಜೋಡಣೆ, ನಾಳೆ ಮಸೂದೆ ಮಂಡನೆ

ಪಿಟಿಐ
Published 19 ಡಿಸೆಂಬರ್ 2021, 12:04 IST
Last Updated 19 ಡಿಸೆಂಬರ್ 2021, 12:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮತದಾರರ ಪಟ್ಟಿಯನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡುವ ಚುನಾವಣಾ ಸುಧಾರಣೆಗಳ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆದಿದೆ.

ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರ ಹೆಸರಿನ ದೃಢೀಕರಣಕ್ಕಾಗಿ ಮತ್ತು ಹೆಚ್ಚಿನ ಮತ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತದಾರರನ್ನು ಗುರುತಿಸಲೂ ಚುನಾವಣಾ ನೋಂದಣಿ ಅಧಿಕಾರಿಗಳು ಆಧಾರ್ ಸಂಖ್ಯೆ ಪಡೆಯಲಾಗುತ್ತದೆ.

ಆಧಾರ್‌ ಸಂಖ್ಯೆಯನ್ನು ಒದಗಿಸಲಾಗದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ. ಅನಿವಾರ್ಯ ಕಾರಣಗಳಿಂದ ಆಧಾರ್‌ ಒದಗಿಸಲಾಗದವರು ಇತರ ದಾಖಲೆಗಳನ್ನು ನೀಡಬಹುದು ಎಂದು ಮಸೂದೆಯು ಸ್ಪಷ್ಟಪಡಿಸಿದೆ.

ADVERTISEMENT

ಈ ಮಸೂದೆಯನ್ನು ಮಂಡಿಸುವುದಕ್ಕೆ ಮೊದಲಾಗಿ ಜನಪ್ರತಿನಿಧಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗುವುದು. ಇದುವರೆಗೆ ಜನವರಿ 1 ದಿನಾಂಕವನ್ನು ಮಾತ್ರ ಪರಿಗಣಿಸಿ ಆ ವರ್ಷದ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿತ್ತು. ಅದನ್ನು ವರ್ಷದ ಇತರ ಮೂರು ದಿನಾಂಕಗಳಿಗೆ (ಏಪ್ರಿಲ್‌ 1, ಜುಲೈ 1, ಅಕ್ಟೋಬರ್‌ 1) ವಿಸ್ತರಿಸಲಾಗಿದೆ. ಅರ್ಜಿಯಲ್ಲಿ ‘ಪತ್ನಿ‘ ಎಂಬ ಪದದ ಬದಲಿಗೆ ‘ಸಂಗಾತಿ’ ಎಂಬ ಪದ ಸೇರಿಸಲು ಸಹ ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.