ADVERTISEMENT

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಕೋವಿಡ್ ಎಂದ ಖರ್ಗೆ: ಬಿಜೆಪಿ ಕಿಡಿ

ಪಿಟಿಐ
Published 8 ಜುಲೈ 2025, 10:33 IST
Last Updated 8 ಜುಲೈ 2025, 10:33 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ</p></div>

ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ

   

(ಪಿಟಿಐ ಚಿತ್ರ)

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ. ಇಬ್ಬರ ವಿರುದ್ಧ ಅವರು ಆಕ್ಷೇಪಾರ್ಹ ಪದ ಬಳಸಿದ್ದು, ಅವರು ಮತ್ತು ಅವರ ಪಕ್ಷ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅದು ಆಗ್ರಹಿಸಿದೆ.

ADVERTISEMENT

ಸೋಮವಾರ ಛತ್ತೀಸಗಢದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಖರ್ಗೆ ಅವರು, ಮುರ್ಮು ಮತ್ತು ಕೋವಿಂದ್ ಅವರ ಹೆಸರುಗಳನ್ನು ತಪ್ಪಾಗಿ ಉಚ್ಚರಿಸಿದ್ದರು. ಆದಾಗ್ಯೂ, ಅವರು ತಕ್ಷಣವೆ ಅದನ್ನು ಸರಿಪಡಿಸಿಕೊಂಡಿದ್ದರು. ‘ಮುರ್ಮು ಮತ್ತು ಕೋವಿಂದ್ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದೇವೆ ಎಂದು ಬಿಜೆಪಿ ಯಾವಾಗಲೂ ಹೇಳುತ್ತಲೇ ಇರುತ್ತದೆ. ಆದರೆ, ನಮ್ಮ ಆಸ್ತಿಗಳು, ಕಾಡುಗಳು, ನೀರು ಮತ್ತು ನೆಲವನ್ನು ಕಸಿದುಕೊಳ್ಳಲು ಅವರನ್ನು ರಾಷ್ಟ್ರಪತಿ ಮಾಡಿದ್ದೀರಾ’ ಎಂದು ಕೇಳಿದ್ದರು.

ಖರ್ಗೆ ಅವರ ಹೇಳಿಕೆ ‘ಅವಹೇಳನಕಾರಿ ಮತ್ತು ಅಸಹ್ಯಕರ’ ಎಂದು ಬಣ್ಣಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗರವ್ ಭಾಟಿಯ, ‘ಇದು ಕಾಂಗ್ರೆಸ್‌ನ ಡಿಎನ್‌ಎಯಲ್ಲಿರುವ ದಲಿತ, ಆದಿವಾಸಿ ಮತ್ತು ಸಂವಿಧಾನ ವಿರೋಧಿ ಮನಃಸ್ಥಿತಿಯನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನೀವು ದೊಡ್ಡದಾಗಿ ಮಾತನಾಡುತ್ತೀರಿ, ಕೋವಿಂದ್ ಅವರನ್ನು ‘ಕೋವಿಡ್’ ಎಂದು ಮತ್ತು ಮುರ್ಮು ಅವರನ್ನು ‘ಮುರ್ಮಾ ಜಿ’ ಎಂದು ಕರೆದಿರುವಿರಿ. ಭೂ ಮಾಫಿಯಾದ ಬಗ್ಗೆ ಮಾತನಾಡುತ್ತಾ ರಾಷ್ಟ್ರಪತಿಗಳ ಹೆಸರನ್ನು ಉಲ್ಲೇಖಿಸಿದ್ದೀರಿ’ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.