ADVERTISEMENT

ಬಡವರ ಸುಲಿಗೆಯೇ ಮೋದಿ ಸರ್ಕಾರದ ಆಡಳಿತ ಮಂತ್ರ: ಖರ್ಗೆ

ಪಿಟಿಐ
Published 23 ಜುಲೈ 2025, 14:15 IST
Last Updated 23 ಜುಲೈ 2025, 14:15 IST
ಖರ್ಗೆ 
ಖರ್ಗೆ    

ನವದೆಹಲಿ: ‘ಬಡವರನ್ನು ಲೂಟಿ ಮಾಡಿ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವುದೇ ನರೇಂದ್ರ ಮೋದಿ ಸರ್ಕಾರದ ಆಡಳಿತ ಮಂತ್ರ’ ಎಂದು ಕಾಂಗ್ರೆಸ್ ದೂರಿದೆ. 

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 2015–16ರಿಂದ 2024–25ರ ಅವಧಿಯಲ್ಲಿ ವಿತರಿಸಿದ್ದ ₹12.08 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಸರ್ಕಾರ, ರಾಜ್ಯಸಭೆಗೆ ನೀಡಿರುವ ಉತ್ತರಕ್ಕೆ ಕಾಂಗ್ರೆಸ್‌ ಈ ಪ್ರತಿಕ್ರಿಯೆ ನೀಡಿದೆ.

‘ಕಳೆದ 9 ವರ್ಷಗಳಲ್ಲಿ ತನ್ನ ಕೋಟ್ಯಾಧಿಪತಿ ಸ್ನೇಹಿತರು ಮಾಡಿದ್ದ ₹12 ಲಕ್ಷ ಕೋಟಿ ಸಾಲವನ್ನು ಬಿಜೆಪಿ ಮನ್ನಾ ಮಾಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಮೋದಿ ಸರ್ಕಾರ ತಮ್ಮ ಸ್ನೇಹಿತರಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಡವರನ್ನು ಸುಲಿಗೆ ಮಾಡುವುದೇ ಬಿಜೆಪಿಯ ಆರ್ಥಿಕ ನೀತಿ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.