ADVERTISEMENT

ಕೇಜ್ರಿವಾಲ್‌ ಹತ್ಯೆಗೆ ಬಿಜೆಪಿ ಯತ್ನ: ಸಿಎಂ ಅತಿಶಿ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2025, 6:52 IST
Last Updated 19 ಜನವರಿ 2025, 6:52 IST
<div class="paragraphs"><p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅತಿಶಿ. ಪಕ್ಷದ ನಾಯಕ ಸಂಜಯ್‌ ಸಿಂಗ್ ಇದ್ದರು</p></div>

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅತಿಶಿ. ಪಕ್ಷದ ನಾಯಕ ಸಂಜಯ್‌ ಸಿಂಗ್ ಇದ್ದರು

   

ಪಿಟಿಐ ಚಿತ್ರ

ನವದೆಹಲಿ: ‘ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಹತ್ಯೆಗೆ ಬಿಜೆಪಿ ಯತ್ನಿಸುತ್ತಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಭಾನುವಾರ ಆರೋಪಿಸಿದ್ದಾರೆ.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಕೇಜ್ರಿವಾಲ್‌ ಹತ್ಯೆಗೆ ಗೂಂಡಾಗಳನ್ನು ಕಳುಹಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕೇಜ್ರಿವಾಲ್‌ ಅವರ ಕಾರಿನ ಮೇಲೆ ನಡೆದ ದಾಳಿಯಲ್ಲಿ ತೊಡಗಿದ್ದ ರೋಹಿತ್ ತ್ಯಾಗಿ ಎನ್ನುವಾತ ಬಿಜೆಪಿಯ ಅಭ್ಯರ್ಥಿ ಪರ್ವೇಶ್ ವರ್ಮಾ ಅವರೊಂದಿಗೆ ಇರುತ್ತಿದ್ದ’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಪರ್ವೇಶ್ ವರ್ಮಾ ದೆಹಲಿ ವಿಧಾನಸಬಾ ಚುನಾವಣೆಯಲ್ಲಿ ಕೇಜ್ರಿವಾಲ್‌ ವಿರುದ್ಧ ದೆಹಲಿ ವಿಧಾನಸಬಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ.

‘ಪರ್ವೇಶ್ ವರ್ಮಾ ಕೂಡ ಒಬ್ಬ ಕ್ರಿಮಿನಲ್‌. 2011 ರಲ್ಲಿ ಕಳ್ಳತನದ ಮತ್ತು ಹತ್ಯೆ ಪ್ರಯತ್ನದ ಆರೋಪಗಳಿವೆ. ದಾಳಿ ನಡೆದ ಜಾಗದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸುಮಿತ್‌ ಎನ್ನುವಾತನ ಮೇಲೂ ಕಳ್ಳತನದ ಆರೋಪವಿದೆ. ಇವೆಲ್ಲವನ್ನೂ ನೋಡಿದರೆ ಬಿಜೆಪಿಯ ಮೂವರು ಗೂಂಡಾಗಳು ಕೇಜ್ರಿವಾಲ್‌ ಮೇಲೆ ದಾಳಿ ನಡೆಸಿದ್ದಾರೆ. ಕೇಜ್ರಿವಾಲ್‌ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ’ ಎಂದು ಆರೋಪಿಸಿದ್ದಾರೆ.

ಶನಿವಾರ ಕೇಜ್ರಿವಾಲ್‌ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ ಬೆಂಬಲಿಗರು ದಾಳಿ ನಡೆಸಿದ್ದರು. ಘಟನೆಯಲ್ಲಿ ಮೂವರು ಸ್ಥಳೀಯರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.