ADVERTISEMENT

ಕೇರಳ | ಮುಸ್ಲಿಮರ ಮನಗೆಲ್ಲಲು ಜನಸಂಪರ್ಕ ಕಾರ್ಯಕ್ರಮ: BJPಯ ರಾಜೀವ್ ಚಂದ್ರಶೇಖರ್

ಪಿಟಿಐ
Published 7 ನವೆಂಬರ್ 2025, 11:29 IST
Last Updated 7 ನವೆಂಬರ್ 2025, 11:29 IST
<div class="paragraphs"><p>ರಾಜೀವ್ ಚಂದ್ರಶೇಖರ್</p></div>

ರಾಜೀವ್ ಚಂದ್ರಶೇಖರ್

   

ತಿರುವನಂತಪುರ: ಕೇರಳದಲ್ಲಿ ಮುಸ್ಲಿಮರನ್ನು ತಲುಪಲು ಜನಸಂಪರ್ಕ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದಾಗಿ ಬಿಜೆಪಿಯ ಕೇರಳ ಘಟಕ ಹೇಳಿದೆ.

‘ಇದು ರಾಜಕೀಯೇತರ ಕಾರ್ಯಕ್ರಮವೇ ಹೊರತು ಮತ ಪಡೆಯಲು ಅಲ್ಲ. ಬದಲಿಗೆ ಪಕ್ಷದ ಪರವಾದ ನಂಬಿಕೆಯನ್ನು ಹೆಚ್ಚಿಸುವ ಕಾರ್ಯಕ್ರಮ ಇದಾಗಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಜೀವ ಚಂದ್ರಶೇಖರ್ ಹೇಳಿದ್ದಾರೆ.

ADVERTISEMENT

‘ಈ ಕಾರ್ಯಕ್ರಮವು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಅಬ್ದುಲ್ ಸಲಾಂ ಅವರ ಮುಂದಾಳತ್ವದಲ್ಲಿ ನಡೆಯಲಿದೆ. ಬಿಜೆಪಿಯು ಮುಸ್ಲಿಂ ಸಮುದಾಯದ ವಿರೋಧಿ ಎಂಬ ತಪ್ಪು ಕಲ್ಪನೆಯನ್ನು ತೊಡೆದುಹಾಕುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದಿದ್ದಾರೆ.

‘ಬಿಜೆಪಿಯು ಮುಸ್ಲಿಮರ ಪರವಾಗಿ ಕೆಲಸ ಮಾಡದು ಎಂಬ ಸುಳ್ಳನ್ನು ಕೇರಳದಲ್ಲಿ ಕಳೆದ ಎರಡು ದಶಕಗಳಿಂದ ವ್ಯವಸ್ಥಿತವಾಗಿ ಹರಡಲಾಗುತ್ತಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ‘ಸಂವಿಧಾನವೇ ನಮಗೆ ಮಾರ್ಗದರ್ಶಿ. ನಮ್ಮದು ಎಲ್ಲ ಸಮುದಾಯಗಳ ಪರವಾಗಿರುವ ಸರ್ಕಾರ’ ಎಂದಿದ್ದರು. ಆ ಸಂದೇಶವನ್ನೇ ಮುಸ್ಲಿಂ ಸಮುದಾಯಕ್ಕೆ ನೀಡುವ ಕಾರ್ಯಕ್ರಮ ಇದಾಗಿದೆ’ ಎಂದು ಹೇಳಿದ್ದಾರೆ.

‘ನಾವಿರುವುದೇ ನಿಮ್ಮ ಸೇವೆಗಾಗಿ. ಯಾವುದೇ ಜಾತಿ, ಧರ್ಮ, ಸಮುದಾಯಗಳನ್ನು ಮೀರಿ ಪ್ರತಿಯೊಬ್ಬ ಮಲಯಾಳಿಯ ಅಗತ್ಯಗಳಿಗೆ ತಕ್ಕಂತೆ ಪಕ್ಷ ಕೆಲಸ ಮಾಡಲಿದೆ. ಇದಕ್ಕಾಗಿ ‘ವಿಕಸಿತ್ ಕೇರಳಂ’ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಲ್ಲಿ ರಾಜ್ಯದ ಪ್ರತಿಯೊಬ್ಬರ ಅಭಿವೃದ್ಧಿಗೂ ಸಮಾನ ಅವಕಾಶ, ಉದ್ಯೋಗ ಮತ್ತು ಜೀವನ ಮಟ್ಟ ಸುಧಾರಣೆ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡಲಿದೆ’ ಎಂದು ರಾಜೀವ್ ತಿಳಿಸಿದ್ದಾರೆ.

‘ಕೇರಳದಲ್ಲಿರುವ ಮುಸ್ಲಿಮರ ಪ್ರತಿಯೊಂದು ಮನೆಗೂ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕಳೆದ 70 ವರ್ಷಗಳಿಂದ ಹರಡುತ್ತಿರುವ ಸುಳ್ಳುಗಳನ್ನು ನಂಬಂದಂತೆ ಮತ್ತು ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿಯನ್ನು ನಂಬುವಂತೆ ಮುದ್ರಿಸಲಾದ ಕರಪತ್ರಗಳನ್ನು ಹಂಚಲಾಗುವುದು. ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಸ್ಲಿಂ ಪರವಾಗಿ ಕೈಗೊಂಡಿರುವ ಕೆಲಸಗಳನ್ನು ತಿಳಿಸಲಾಗುವುದು’ ಎಂದಿದ್ದಾರೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರದಲ್ಲಿ ನಡೆಯಲಿದೆ. ಅದಕ್ಕೂ ಮೊದಲು ‍ಪಕ್ಷದ ಮುಸ್ಲಿಂ ಓಲೈಕೆ ಕಾರ್ಯಕ್ರಮವು ಮಹತ್ವ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.