ADVERTISEMENT

ಮೀನುಗಾರರ ರಕ್ಷಣೆ ಕುರಿತು ಕೇಂದ್ರಕ್ಕೆ ಪತ್ರ ಬರೆದ ಬಿಜೆಪಿ ನಾಯಕ ಅಣ್ಣಾಮಲೈ

ಪಿಟಿಐ
Published 17 ಮಾರ್ಚ್ 2024, 12:13 IST
Last Updated 17 ಮಾರ್ಚ್ 2024, 12:13 IST
<div class="paragraphs"><p> ಅಣ್ಣಾಮಲೈ</p></div>

ಅಣ್ಣಾಮಲೈ

   

ಚೆನ್ನೈ: ತಮಿಳುನಾಡಿನ 21 ಮೀನುಗಾರರನ್ನು ಶ್ರೀಲಂಕಾ ಬಂಧಿಸಿದ್ದು, ಅವರನ್ನು ಸುರಕ್ಷಿತವಾಗಿ ಶೀಘ್ರವೇ ಬಿಡುಗಡೆ ಮಾಡಿಸಬೇಕೆಂದು ರಾಜ್ಯ ಬಿಜೆಪಿ ಹಾಗೂ ಪಿಎಂಕೆ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಮಾರ್ಚ್‌ 16ರ ಶನಿವಾರ ರಾತ್ರಿಯಂದು ತಮಿಳುನಾಡಿನ 21 ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ, ಮೀನುಗಾರರ ಎರಡು ದೋಣಿಗಳನ್ನೂಝ ವಶಕ್ಕೆ ಪಡೆದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್‌ ಹೇಳಿದ್ದಾರೆ. 

ADVERTISEMENT

ಈ ಬಗ್ಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ಗೆ ಪತ್ರ ಬರೆದಿರುವ ಅಣ್ಣಾಮಲೈ ‘ರಾಜ್ಯದ ರಾಮೇಶ್ವರಂನ 21 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿರುವ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತೇವೆ. ಮೀನುಗಾರರ 2 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಶೀಘ್ರವೇ ಸ್ವದೇಶಕ್ಕೆ ಕರೆತರಲು ಹಾಗೂ ಅವರ ದೋಣಿಗಳನ್ನು ಬಿಡುಗಡೆ ಮಾಡಲು ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯಸ್ಥಿಕೆಯನ್ನು ನಾವು ಕೋರುತ್ತೇವೆ’ ಎಂದಿದ್ದಾರೆ. ಇದನ್ನು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅನ್ಬುಮಣಿ ‘ಕಳೆದ ಒಂದು ವಾರದಲ್ಲಿ ತಮಿಳು ನಾಡು ಹಾಗೂ ಕಾರೈಕಾಲ್‌ನ (ಪುದುಚೇರಿ) 58 ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ. ಕಳೆದ ಎರಡು ತಿಂಗಳಿನಲ್ಲಿ 80ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಲಾಗಿದೆ. ತಮಿಳು ನಾಡು ಮೀನುಗಾರರ ಬಂಧನ ಮತ್ತು ಅವರ ಮೇಲೆ ದಾಳಿ ನಡೆಯಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. 58 ಮೀನುಗಾರರು ಮತ್ತು ಅವರ ದೋಣಿಗಳನ್ನು ಬಿಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.