ಬಿಜೆಪಿ ಶಾಸಕ ಗೋಪಿಚಂದ್ ಪಡಾಲ್ಕರ್
ಕೃಪೆ: X/@GopichandP_MLA
ಮುಂಬೈ: ಕಾಲೇಜಿಗೆ ಹೋಗುವ ಹಿಂದೂ ಹೆಣ್ಣುಮಕ್ಕಳು ಜಿಮ್‌ಗಳಿಗೆ ಹೋಗುವ ಬದಲು ಮನೆಗಳಲ್ಲಿಯೇ ಯೋಗ ಮಾಡಬೇಕು ಎಂದು ಬಿಜೆಪಿ ಶಾಸಕ ಗೋಪಿಚಂದ್ ಪಡಾಲ್ಕರ್ ಕರೆ ನೀಡಿದ್ದಾರೆ.
ಸಾಂಗ್ಲಿ ಜಿಲ್ಲೆಯ ಜತ್ತ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪಡಾಲ್ಕರ್ ಅವರು, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ್ದಾರೆ.
'ಹಿಂದೂ ಹೆಣ್ಣುಮಕ್ಕಳು ತರಬೇತುದಾರರು ಯಾರು ಎಂಬುದನ್ನು ತಿಳಿಯದೆ ಜಿಮ್‌ಗಳಿಗೆ ಹೋಗಬೇಡಿ. ಇದು ನನ್ನ ಶ್ರದ್ಧಾಪೂರ್ವಕ ಮನವಿ. ಅದರ ಬದಲು, ಮನೆಗಳಲ್ಲೇ ಯೋಗ ಮಾಡಿ. ಎಷ್ಟು ದೊಡ್ಡ ಪಿತೂರಿ ನಡೆಯುತ್ತಿದೆ ಎಂಬುದು ನಿಮಗೆ ಗೊತ್ತಿಲ್ಲ. ಮನೆಗಳಲ್ಲಿಯೇ ಯೋಗ ಅಥವಾ ಕಸರತ್ತು ಮಾಡುವಂತೆ ಹಿಂದೂ ಹೆಣ್ಣು ಮಕ್ಕಳಿಗೆ ತಿಳಿಸಿ. ಅವರೇನು ಜಿಮ್ನಾಸ್ಟಿಕ್ ತರಬೇತಿಗೆ ಹೋಗಬೇಕಿಲ್ಲ' ಎಂದು ಹೇಳಿದ್ದಾರೆ.
ಗುರುತಿನ ವಿವರಗಳಿಲ್ಲದೆ ಕಾಲೇಜುಗಳಿಗೆ ಬರುವ ಯುವಕರನ್ನು ಗುರಿತಿಸಬೇಕು. ಅವರಿಗೆ ಪ್ರವೇಶ ನಿರಾಕರಿಸಬೇಕು ಎಂದೂ ಹೇಳಿರುವ ಅವರು, 'ನಾವು ಬಲವಾದ ತಡೆಗೋಡೆ ನಿರ್ಮಿಸಬೇಕಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.