ADVERTISEMENT

ಬಿಜೆಪಿ ದೇಶವನ್ನು 1990ಕ್ಕೆ ಒಯ್ಯುತ್ತಿದೆ: ಅಸಾದುದ್ದೀನ್ ಒವೈಸಿ

ಐಎಎನ್ಎಸ್
Published 18 ಮೇ 2022, 11:00 IST
Last Updated 18 ಮೇ 2022, 11:00 IST
ಅಸಾದುದ್ದೀನ್ ಒವೈಸಿ
ಅಸಾದುದ್ದೀನ್ ಒವೈಸಿ   

ಹೈದರಾಬಾದ್: ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ದೇಶವನ್ನು 1990ಕ್ಕೆ ಮರಳಿ ಒಯ್ಯುತ್ತಿದೆ ಎಂದು ಅವರು ಟೀಕಿಸಿದ್ದಾರೆ.

‘ವಿಡಿಯೊ ಸಮೀಕ್ಷೆ ವೇಳೆ ಮಸೀದಿಯ ಒಳಗೆ ಪತ್ತೆಯಾದದ್ದು ಹಿಂದು ವಕೀಲರು ಪ್ರತಿಪಾದಿಸಿದಂತೆ ಶಿವ ಲಿಂಗವಲ್ಲ, ಕಾರಂಜಿ’ ಎಂದು ಅವರು ಹೇಳಿದ್ದಾರೆ.

‘ಮುಸ್ಲಿಮರ ಧಾರ್ಮಿಕ ಆಚರಣೆಗೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ನಾವಲ್ಲಿ ನಮಾಜ್ ಮಾಡಬಹುದು. ಅದು ಕಾರಂಜಿ. ಇದೇ ರೀತಿ ಆದರೆ ತಾಜ್‌ಮಹಲ್‌ನಲ್ಲಿರುವ ಎಲ್ಲ ಕಾರಂಜಿಗಳನ್ನೂ ಮುಚ್ಚಬೇಕಾಗಬಹುದು’ ಎಂದು ಒವೈಸಿ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಜಾಗಕ್ಕೆ ರಕ್ಷಣೆ ನೀಡಿ ಮತ್ತು ಮುಸ್ಲಿಮರು ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ವಾರಾಣಸಿ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚನೆ ನೀಡಿತ್ತು.

ಆದಾಗ್ಯೂ, ಸ್ಥಳೀಯ ನ್ಯಾಯಾಲಯದ ವಿಚಾರಣೆಗೆ ತಡೆಯೊಡ್ಡಲು ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.