ADVERTISEMENT

VIDEO: ರಾಮ ನವಮಿಯಂದು ರಾಮಸೇತು ದರ್ಶನ ಪಡೆದ ಪ್ರಧಾನಿ ಮೋದಿ

ಪಿಟಿಐ
Published 6 ಏಪ್ರಿಲ್ 2025, 10:24 IST
Last Updated 6 ಏಪ್ರಿಲ್ 2025, 10:24 IST
<div class="paragraphs"><p>ರಾಮಸೇತು, ನರೇಂದ್ರ ಮೋದಿ</p></div>

ರಾಮಸೇತು, ನರೇಂದ್ರ ಮೋದಿ

   

ನವದೆಹಲಿ: ಶ್ರೀಲಂಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಹಿಂತಿರುಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಮಾನದಿಂದಲೇ ರಾಮಸೇತು ದರ್ಶನ ಪಡೆದಿದ್ದಾರೆ.

ರಾಮ ನವಮಿಯಂದೇ ಪ್ರಧಾನಿ ಮೋದಿ ರಾಮಸೇತು ದರ್ಶನ ಪಡೆದಿದ್ದು, ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ADVERTISEMENT

'ಸ್ವಲ್ಪ ಸಮಯದ ಹಿಂದೆ ಶ್ರೀಲಂಕಾದಿಂದ ಮರಳುವಾಗ ರಾಮಸೇತುವಿನ ದರ್ಶನ ಪಡೆಯುವ ಸೌಭಾಗ್ಯ ದೊರಕಿತು. ದೈವಿಕ ನಿದರ್ಶನ ಎಂಬಂತೆ ಅಯೋಧ್ಯೆಯಲ್ಲಿ ಸೂರ್ಯ ತಿಲಕದ ಸಂದರ್ಭದಲ್ಲೇ ಈ ದರ್ಶನ ಪಡೆದಿದ್ದೇನೆ. ಶ್ರೀರಾಮ ದೇವರು ನಮ್ಮೆಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ದೇವರ ಆಶೀರ್ವಾದ ಸದಾ ಇರಲಿ' ಎಂದು ಬರೆದುಕೊಂಡಿದ್ದಾರೆ.

ಶ್ರೀಲಂಕಾದಿಂದ ನೇರವಾಗಿ ತಮಿಳುನಾಡಿಗೆ ತೆರಳಿದ ಪ್ರಧಾನಿ ಮೋದಿ ನೂತನ ಪಂಬನ್ ಸೇತುವೆ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಶ್ರೀಲಂಕಾದಲ್ಲಿ ಭಾರತದ ನೆರವಿನ ಎರಡು ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.