ADVERTISEMENT

AI–171 ಅಪಘಾತ: Boeing 787 Dreamliner ವಿಮಾನಗಳ ತಪಾಸಣೆ; ಹಾರಾಟ ವಿಳಂಬ

ಪಿಟಿಐ
Published 14 ಜೂನ್ 2025, 13:00 IST
Last Updated 14 ಜೂನ್ 2025, 13:00 IST
<div class="paragraphs"><p>ಏರ್‌ ಇಂಡಿಯಾಗೆ ಸೇರಿದ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನ (ಸಂಗ್ರಹ ಚಿತ್ರ)</p></div>

ಏರ್‌ ಇಂಡಿಯಾಗೆ ಸೇರಿದ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನ (ಸಂಗ್ರಹ ಚಿತ್ರ)

   

ರಾಯಿಟರ್ಸ್

ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಏರ್‌ ಇಂಡಿಯಾದ ಎಐ–171 ವಿಮಾನ ಅಪಘಾತದ ನಂತರ ಬೋಯಿಂಗ್ ಕಂಪನಿಯ 787 ಡ್ರೀಮ್‌ಲೈನರ್‌ ಮಾದರಿಯ ವಿಮಾನಗಳಲ್ಲಿ ತಪಾಸಣೆ ಕಾರ್ಯವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ನಿರ್ದೇಶನದಂತೆ ಕೈಗೊಳ್ಳಲಾಗಿದೆ. ಇದರ ಪರಿಣಾಮ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ.

ADVERTISEMENT

ಸಾಮಾಜಿಕ ಮಾಧ್ಯಮ ಎಕ್ಸ್‌ ಮೂಲಕ ಏರ್ ಇಂಡಿಯಾ ಈ ಮಾಹಿತಿಯನ್ನು ನೀಡಿದೆ.

ಏರ್‌ ಇಂಡಿಯಾ ಬಳಿ ಬೋಯಿಂಗ್‌ ಕಂಪನಿಯ 787–8/9 ಮಾದರಿಯ 33 ವಿಮಾನಗಳಿವೆ. ಇದರಲ್ಲಿ ಬೋಯಿಂಗ್ 787–8 ಮಾದರಿಯ 26 ವಿಮಾನಗಳು ಹಾಗೂ ಬೋಯಿಂಗ್ 787–9 ಮಾದರಿಯ ಏಳು ವಿಮಾನಗಳಿವೆ. ದೂರದ ದೇಶಗಳಿಗೆ ಪ್ರಯಾಣಿಸುವ ವಿಮಾನಗಳಲ್ಲಿ ತಪಾಸಣೆ ನಡೆಯುತ್ತಿದ್ದು, ಇದು ಕೆಲ ಸಮಯ ತೆಗೆದುಕೊಳ್ಳಲಿದೆ. ಇದರಿಂದಾಗಿ ಹಾರಾಟ ಆರಂಭಿಸಲು ವಿಳಂಬವಾದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

DGCA ನಿರ್ದೇಶನದಂತೆ ಡ್ರೀಮ್‌ಲೈನರ್ ವಿಮಾನಗಳಲ್ಲಿ ಒಂದು ಬಾರಿ ತಪಾಸಣೆ ನಡೆಸಲಾಗುತ್ತಿದೆ. ದೂರದ ಪ್ರಯಾಣದ ನಂತರ ಭಾರತಕ್ಕೆ ಮರಳಿರುವ ಬೋಯಿಂಗ್ 787 ವಿಮಾನಗಳಲ್ಲಿ ಈ ತಪಾಸಣೆ ನಡೆಸಿದ ನಂತರವೇ ಮುಂದಿನ ಹಾರಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಂಸ್ಥೆ ಹೇಳಿದೆ

‘ಸದ್ಯ ಬೋಯಿಂಗ್ 787ನ ಒಂಬತ್ತು ವಿಮಾನಗಳಲ್ಲಿ ಈಗ ತಪಾಸಣೆ ನಡೆಸಲಾಗುತ್ತಿದೆ. ಉಳಿದ 24 ವಿಮಾನಗಳ ತಪಾಸಣೆ ಡಿಜಿಸಿಎ ನಿರ್ದೇಶನದಂತೆ ಕಾಲಕಾಲಕ್ಕೆ ನಡೆಸಲಾಗುವುದು’ ಎಂದು ಏರ್‌ ಇಂಡಿಯಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.