ADVERTISEMENT

ಬಾಲಿವುಡ್‌ ನಟಿ ಪ್ರವೀಣ ದೇಶಪಾಂಡೆ ನಿಧನ

ಪಿಟಿಐ
Published 18 ಫೆಬ್ರುವರಿ 2026, 13:12 IST
Last Updated 18 ಫೆಬ್ರುವರಿ 2026, 13:12 IST
   

ಬಾಲಿವುಡ್‌ನ ಪ್ರಮುಖ ಚಿತ್ರಗಳಾದ ‘ರೆಡಿ’, ‘ಗಬ್ಬರ್ ಈಸ್ ಬ್ಯಾಕ್’ ಮತ್ತು ‘ಡಿ ಡೇ’ ನಂತಹ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಸಿಕೊಂಡಿದ್ದ ನಟಿ ಪ್ರವೀಣ ದೇಶಪಾಂಡೆ (60) ರಕ್ತ ಕ್ಯಾನ್ಸರ್‌ನಿಂದ ಮಂಗಳವಾರ ನಿಧನರಾಗಿದ್ದಾರೆ.

ನಟಿಯ ಸಾವಿನ ಕುರಿತು  ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಪ್ರವೀಣ ದೇಶಪಾಂಡೆ ಅವರು ನಿಧನರಾಗಿದ್ದಾರೆ’ ಎಂದು ಬರೆದಿದ್ದಾರೆ.

ನಟಿಗೆ ಇಬ್ಬರು ಮಕ್ಕಳಿದ್ದಾರೆ. ಇವರು ಮರಾಠಿ ರಂಗಭೂಮಿ, ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಜತೆಗೆ ಹಿಂದಿ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ADVERTISEMENT

ಇವರ ಜನಪ್ರಿಯ ಸಿನಿಮಾಗಳು

‘ಪರಿಣಿತಿ’, ‘ಅವಾಗತ್’, ‘ಘರ್ ಏಕ್ ಮಂದಿರ್’, ‘ಕುಂಕುಮ್ - ಏಕ್ ಪ್ಯಾರಾ ಸಾ ಬಂಧನ್’, ‘ಏಕ್ ವಿಲಿಯನ್’, ‘ಪರ್ಮಾನು ದ ಸ್ಟೋರಿ ಆಫ್ ಪೋಖ್ರಾನ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿ ನೆಟ್‌ಫ್ಲಿಕ್ಸ್ ಸರಣಿ ‌‘ತಸ್ಕಾರಿ: ದಿ ಸ್ಮಗ್ಲರ್ಸ್ ವೆಬ್’ ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.