ADVERTISEMENT

ಪಾಕ್‌ ಮೂಲಕ ಹೆರಾಯಿನ್‌ ಹೊತ್ತು ಬರುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್‌

ಐಎಎನ್ಎಸ್
Published 9 ಮೇ 2022, 5:47 IST
Last Updated 9 ಮೇ 2022, 5:47 IST
ಡ್ರೋನ್‌ ಮೂಲಕ ವಶಕ್ಕೆ ಪಡೆದ ಮಾದಕ ವಸ್ತು
ಡ್ರೋನ್‌ ಮೂಲಕ ವಶಕ್ಕೆ ಪಡೆದ ಮಾದಕ ವಸ್ತು    

ಅಮೃತಸರ: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ಮುಂಜಾನೆ ಪಂಜಾಬ್‌ನ ಅಮೃತಸರದ ಅಂತರಾಷ್ಟ್ರೀಯ ಗಡಿಯ ಸಮೀಪ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ್ದು, ಅದರಲ್ಲಿದ್ದ ಒಟ್ಟಾರೆ 10 ಕೆ.ಜಿ.ಯಷ್ಟು ಹೆರಾಯಿನ್‌ ಅನ್ನು ವಶಕ್ಕೆ ಪಡೆದಿದೆ.

‘ಡ್ರೋನ್ ಮೂಲಕ ಮಾದಕವಸ್ತು ಕಳ್ಳಸಾಗಣೆ ಮಾಡುವ ಪಾಕ್‌ ಯತ್ನವನ್ನು ಬಿಎಸ್‌ಎಫ್ ಪಡೆಗಳು ವಿಫಲಗೊಳಿಸಿವೆ. ಪಾಕ್‌ನಿಂದ ಬರುತ್ತಿದ್ದ ಡ್ರೋನ್‌ಗೆ ಬಿಎಸ್‌ಎಫ್‌ ಸೈನಿಕರು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. 9 ಪೊಟ್ಟಣಗಳಲ್ಲಿ 10.670 ಕೆ.ಜಿ ಹೆರಾಯಿನ್ ಅನ್ನು ಡ್ರೋನ್‌ ಮೂಲಕ ಸಾಗಿಸಲಾಗುತ್ತಿತ್ತು’ ಎಂದು ಬಿಎಸ್‌ಎಫ್ ಟ್ವೀಟ್ ಮಾಡಿದೆ.

ಪಂಜಾಬ್‌ನಲ್ಲಿ ಭಾರತವು ಪಾಕಿಸ್ತಾನದೊಂದಿಗೆ 553 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಇದಕ್ಕೆ 135 ಬಿಎಸ್‌ಎಫ್‌ ಪಡೆಗಳ ನಿಗಾ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.