ADVERTISEMENT

ನೊಯ್ಡಾ ಸ್ಪೋರ್ಟ್ಸ್ ಸಿಟಿ ಯೋಜನೆಯಲ್ಲಿ ₹9 ಸಾವಿರ ಕೋಟಿ ಹಗರಣ: ಸಿಬಿಐ ದಾಳಿ

ಪಿಟಿಐ
Published 22 ಮಾರ್ಚ್ 2025, 10:05 IST
Last Updated 22 ಮಾರ್ಚ್ 2025, 10:05 IST
<div class="paragraphs"><p>ಸಿಬಿಐ</p></div>

ಸಿಬಿಐ

   

ನವದೆಹಲಿ: ನೊಯ್ಡಾದಲ್ಲಿ ಸ್ಫೋರ್ಟ್ಸ್‌ ಸಿಟಿ ಯೋಜನೆಯ ಹಂಚಿಕೆ, ಅಭಿವೃದ್ಧಿ ಮತ್ತು ಮಂಜೂರಾತಿಯಲ್ಲಿ 2011 ಮತ್ತು 2014 ನಡುವೆ ನಡೆದ ₹9 ಸಾವಿರ ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ನಗರದ ವಿವಿಧೆಡೆ ಸಿಬಿಐ ದಾಳಿ ನಡೆಸಿದ್ದು, ಮೂರು ಪ್ರಕರಣಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲಹಾಬಾದ್‌ ಹೈಕೋರ್ಟ್‌ ಆದೇಶದ ಮೇರೆಗೆ, ರಿಯಲ್‌ ಎಸ್ಟೇಟ್‌ ಸಂಸ್ಥೆಗಳಾದ ಲಾಜಿಕ್ಸ್‌ ಇನ್ಪ್ರಾ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌, ಕ್ಸಾನಾಡು ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೋಟಸ್ ಗ್ರೀನ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಅವುಗಳ ನಿರ್ದೇಶಕರು ಮತ್ತು ನೊಯ್ಡಾ ಪ್ರಾಧಿಕಾರದ ಕೆಲವು ಅನಾಮಧೇಯ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ನೊಯ್ಡಾ ಸ್ಪೋರ್ಟ್ ಸಿಟಿ ಯೋಜನೆಯು ನೊಯ್ಡಾದ ಸೆಕ್ಟರ್ 78, 79 ಮತ್ತು 150ರಲ್ಲಿ ವಸತಿ ಮತ್ತು ವಾಣಿಜ್ಯ ಪ್ರದೇಶಗಳೊಂದಿಗೆ ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಯೋಜನೆಯ ಹಂಚಿಕೆಯ ನಂತರ, ಹಂಚಿಕೆದಾರರು ನೊಯ್ಡಾ ಪ್ರಾಧಿಕಾರದ ಅಧಿಕಾರಿಗಳ ಜೊತೆಗೂಡಿ, ಯೋಜನೆ ಸಂಬಂಧಿತ ಷರತ್ತುಗಳನ್ನು ಹಲವು ಬಾರಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು ₹9 ಸಾವಿರ ಕೋಟಿ ಆರ್ಥಿಕ ನಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಬೃಹತ್‌ ಯೋಜನೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಸಿಎಜಿ ವರದಿ ಮಾಡಿದರೂ, ಅಧಿಕಾರಿಗಳು ಯಾವುದೇ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಸಂಬಂಧ, ದೆಹಲಿ ಮತ್ತು ನೊಯ್ಡಾದ ಹಲವು ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್‌ ಪುರಾವೆ ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ ಎಂದು ಸಿಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.