ನವದೆಹಲಿ (): ಅಂಗವಿಕಲರಿಗೆ ಅಗತ್ಯ ವಸ್ತುಗಳು ಸುಲಭವಾಗಿ ದೊರಕಲು ಸಹಾಯವಾಗುವಂತೆ ಕೇಂದ್ರ ಸರ್ಕಾರವು ಕರಡು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
ಅಂಗವಿಕಲರು ವಸ್ತುಗಳನ್ನು ಮುಕ್ತವಾಗಿ ಖರೀದಿಸಲು ಸಹಾಯವಾಗುವಂತೆ ದೈನಂದಿನ ಬಳಕೆಯ ವಸ್ತುಗಳಲ್ಲಿ ಸಾರ್ವತ್ರಿಕ ಮತ್ತು ಸರಳ ವಿನ್ಯಾಸ, ಸ್ಪರ್ಶ ಸಂಬಂಧಿ ಲಕ್ಷಣಗಳು ಮತ್ತು ಸ್ಪಷ್ಟವಾದ ಲೇಬಲಿಂಗ್‌ಗಳು ಇರಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಮತ್ತು ಸುಪ್ರೀಂ ಕೋರ್ಟ್ ನಿದರ್ಶನಗಳಿಗೆ ಅನುಗುಣವಾಗಿ ಅಂಗವಿಕಲರ ಸಬಲೀಕರಣ ಇಲಾಖೆ ಸಿದ್ಧಪಡಿಸಿದ ಕರಡು, ಜಾಗತಿಕವಾಗಿ ಗುರುತಿಸಲ್ಪಟ್ಟ ‘ಪಿಒಯುಆರ್’ ಆಧಾರವಾಗಿಟ್ಟುಕೊಂಡಿದೆ.
ಪಾತ್ರೆ, ಆಹಾರ, ಬಟ್ಟೆ, ಮಕ್ಕಳ ಉತ್ಪನ್ನ, ಪಿಠೋಪಕರಣ, ವೈದ್ಯಕೀಯ ಉತ್ಪನ್ನಗಳು ಸೇರಿದಂತೆ ಅನೇಕ ವಸ್ತುಗಳನ್ನು ಸುಲಭವಾಗಿ ಗ್ರಹಿಸುವಂತೆ ಮಾರ್ಪಾಡು ಮಾಡಬೇಕು. ಆ ಮೂಲಕ ಅಂಗವಿಕಲರಿಗೆ ವಸ್ತು ಖರೀದಿಗೆ ನೆರವಾಗುವಂತೆ ತಿಳಿಸಿದೆ.
ಮಾರ್ಗಸೂಚಿಯಲ್ಲಿ ದೈನಂದಿನ ಬಳಕೆಯ ಪ್ರಮುಖ ವಸ್ತುಗಳ 20 ವರ್ಗಗಳ ಮೇಲೆ ನಿಯಮ ರೂಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.