ADVERTISEMENT

ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಏರಿಕೆ; ಗ್ರಾಹಕರ ಮೇಲೆ ಪರಿಣಾಮ ಇಲ್ಲ

ಏಜೆನ್ಸೀಸ್
Published 6 ಮೇ 2020, 1:54 IST
Last Updated 6 ಮೇ 2020, 1:54 IST
ಪೆಟ್ರೋಲ್ ಪಂಪ್
ಪೆಟ್ರೋಲ್ ಪಂಪ್   

ನವದೆಹಲಿ : ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕ ಲೀಟರ್‌ಗೆ ₹ 10 ಮತ್ತು ಡೀಸೆಲ್ ಮೇಲಿನ ಸುಂಕ‌ ಲೀಟರ್‌ಗೆ ₹ 13 ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ತೈಲ ಕಂಪನಿಗಳಿಗೆ ಮಾತ್ರ ಹೊರೆಯಾಗಲಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರೆಲ್‌ಗೆ 30 ಡಾಲರ್ ಆಗಿದ್ದರೂ, ಭಾರತೀಯರು ಒಂದು ಲೀಟರ್ ಪೆಟ್ರೋಲ್‌ಗೆ ₹ 70 ಪಾವತಿ ಮಾಡುತ್ತಿದ್ದಾರೆ. ಅಂದರೆ ಕಚ್ಛಾ ತೈಲ ಬೆಲೆ ಇಳಿಕೆಯಾದರೂ ಮುಂಬರುವ ದಿನಗಳಲ್ಲಿಪೆಟ್ರೋಲ್ , ಡೀಸೆಲ್‌ ಬೆಲೆ ಕಡಿಮೆಯಾಗುವುದಿಲ್ಲ.

ADVERTISEMENT

ಅಬಕಾರಿ ಸುಂಕ ಏರಿಕೆಯಾಗಿದ್ದರೂ, ಪಂಪ್‌ನಲ್ಲಿ ಮಾರಾಟವಾಗುವ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.

ರಾಜ್ಯದಲ್ಲಿ ತೈಲ ದರ ಯಥಾಪ್ರಕಾರ
ಬೆಂಗಳೂರು: 'ತೈಲದ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿರುವುದು ಜನರ ಮೇಲೆ ಪರಿಣಾಮ ಬೀರದು. ರಾಜ್ಯದಲ್ಲಿ ತೈಲ ದರ ಯಥಾಪ್ರಕಾರ ಇರಲಿದೆ' ಎಂದು ಅಖಿಲ ಕರ್ನಾಟಕ ಪೆಟ್ರೊಲಿಯಂ ಟ್ರೇಡರ್ಸ್ ಒಕ್ಕೂಟದ ಅಧ್ಯಕ್ಷ ಕೆ.ಎಂ. ಬಸವೇಗೌಡ ತಿಳಿಸಿದರು.
'ಪ್ರಜಾವಾಣಿ'ಗೆ ಜೊತೆ ಮಾತನಾಡಿದ ಅವರು, 'ಲಾಕ್‌ಡೌನ್ ವೇಳೆ ತೈಲ ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ತೈಲದ ಸಂಗ್ರಹವಿದೆ. ಕೇಂದ್ರ ಸುಂಕ ಏರಿಕೆ ಮಾಡಿರುವುದು ತೈಲ ಕಂಪನಿಗಳಿಗೆ ಅನ್ವಯ ಆಗುತ್ತದೆ. ಗ್ರಾಹಕರಿಗೆ ಯಾವುದೇ ಪರಿಣಾಮ ಬೀರದು. ರಾಜ್ಯ ಸರ್ಕಾರ ಏನಾದರೂ ಸುಂಕ ಹೆಚ್ಚಳ ಮಾಡಿದರೆ ಮಾತ್ರ ಗ್ರಾಹಕರಿಗೆ ಪರಿಣಾಮ ಬೀರಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.