ADVERTISEMENT

ಹಲ್ಲೆ ಪ್ರಕರಣ: ದೆಹಲಿ ಸಿಎಂ ರೇಖಾಗೆ ನೀಡಿದ್ದ CRPF ಭದ್ರತೆ ವಾಪಸ್ ಪಡೆದ ಕೇಂದ್ರ

ಪಿಟಿಐ
Published 25 ಆಗಸ್ಟ್ 2025, 5:10 IST
Last Updated 25 ಆಗಸ್ಟ್ 2025, 5:10 IST
<div class="paragraphs"><p>ದೆಹಲಿ ಮುಖ್ಯಮಂತ್ರಿ&nbsp; ರೇಖಾ ಗುಪ್ತಾ</p></div>

ದೆಹಲಿ ಮುಖ್ಯಮಂತ್ರಿ  ರೇಖಾ ಗುಪ್ತಾ

   

-ಪಿಟಿಐ ಚಿತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ನೀಡಿದ್ದ 'ಝಡ್' ಶ್ರೇಣಿಯ ಸಿಆರ್‌ಪಿಎಫ್ ವಿಐಪಿ ಭದ್ರತೆಯನ್ನು  ಕೇಂದ್ರ ಸರ್ಕಾರ ವಾಪಸ್‌ ಪಡೆದುಕೊಂಡಿದ್ದು, ದೆಹಲಿ ಪೊಲೀಸರೇ ಸಿಎಂ ಅವರಿಗೆ ಭದ್ರತೆ ಒದಗಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

'ಜನ ಸಂವಾದ' ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ರೇಖಾ ಅವರ ಹಲ್ಲೆ ನಡೆಸಿದ್ದನು. ಬಳಿಕ ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್‌ ನಿವಾಸಿ ಸಕರಿಯಾ ರಾಜೇಶ್‌ಭಾಯಿ ಖಿಮ್ಜಿಭಾಯಿ (41) ಎಂಬುವವನನ್ನು ಬಂಧಿಸಿ, ಎಫ್ಐಆರ್‌ ದಾಖಲಿಸಿದ್ದರು.

ಇದು ಸಿಎಂ ರೇಖಾ ಗುಪ್ತಾ ಅವರ ಹತ್ಯೆಗೆ ನಡೆಸಿದ 'ಯೋಜಿತ ಸಂಚಿನ ಭಾಗ' ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆ ನೀಡಿತ್ತು.

‘ಸಿಆರ್‌ಪಿಎಫ್ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದ್ದು, ದೆಹಲಿ ಪೊಲೀಸರು ಈಗ ಸಿಎಂಗೆ ಭದ್ರತೆ ಒದಗಿಸುತ್ತಾರೆ’ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಗುಪ್ತಾ ಹಾಗೂ ಅವರ ಅಧಿಕೃತ ನಿವಾಸದಲ್ಲಿ ಅರೆಸೈನಿಕ ಪಡೆಯ ವಿಐಪಿ ಸೆಕ್ಯೂರಿಟಿ ಗ್ರೂಪ್‌ (ವಿಎಸ್‌ಜಿ) ಅನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಸೂಚನೆಗೆಯ ಮೇರೆಗೆ ದೆಹಲಿ ಸಿಎಂ ಅವರ ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಹಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.