ADVERTISEMENT

ಅಮೆಜಾನ್‌ ವಿರುದ್ಧದ ಹೇಳಿಕೆ ಅಪ್ರಸ್ತುತ

ಪಿಟಿಐ
Published 27 ಸೆಪ್ಟೆಂಬರ್ 2021, 18:18 IST
Last Updated 27 ಸೆಪ್ಟೆಂಬರ್ 2021, 18:18 IST

ನವದೆಹಲಿ: ಆರ್‌ಎಸ್‌ಎಸ್‌ ವಾರಪತ್ರಿಕೆ ಪಾಂಚಜನ್ಯವು ಅಮೆರಿಕದ ಇ–ಕಾಮರ್ಸ್‌ ದೈತ್ಯ ಅಮೆಜಾನ್‌ ಅನ್ನು ‘ಈಸ್ಟ್‌ ಇಂಡಿಯಾ ಕಂಪನಿ 2.0’ ಎಂದಿರುವುದು ಅಪ್ರಸ್ತುತ ಎಂದು ಕಾಂಗ್ರೆಸ್‌ ದೂರಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ರಾಷ್ಟ್ರೀಯ ಹಿತಾಸಕ್ತಿಗಾಗಿ ಏನನ್ನೂ ಹೇಳವುದಿಲ್ಲ,
ಅದಕ್ಕೆ ಏನಿದ್ದರೂ ಆಡಳಿತಾರೂಢ ಬಿಜೆಪಿಯ ಹಿತವಷ್ಟೇ ಮುಖ್ಯ ಎಂದು ಕಾಂಗ್ರೆಸ್‌ ಹೇಳಿದೆ.

ಆದರೂ, ಅಮೆಜಾನ್‌ ವಿರುದ್ಧದ ಆರೋಪಗಳು ಗಂಭೀರವಾಗಿದ್ದು ಅದನ್ನು ನಿರ್ಲಕ್ಷಿಸಲಾಗದು ಎಂದು ಕಾಂಗ್ರೆಸ್ ವಕ್ತಾರ
ಪವನ್ ಖೇರಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.