ADVERTISEMENT

ಲಿಂಗ ಸಮಾನತೆಯಲ್ಲಿ ಛತ್ತೀಸ್‌ಗಡ ಮುಂಚೂಣಿಯಲ್ಲಿ: ನೀತಿ ಆಯೋಗ

ಪಿಟಿಐ
Published 14 ಜೂನ್ 2021, 15:15 IST
Last Updated 14 ಜೂನ್ 2021, 15:15 IST
ಲಿಂಗ ಸಮಾನತೆ- ಪ್ರಾತಿನಿಧಿಕ ಚಿತ್ರ
ಲಿಂಗ ಸಮಾನತೆ- ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸುಸ್ಥಿರ ಅಭಿವೃದ್ಧಿಯ ಗುರಿಯನ್ನು (ಎಸ್‌ಡಿಜಿ) ಸಾಧಿಸುವ ನಿಟ್ಟಿನಲ್ಲಿ ಲಿಂಗ ಸಮಾನತೆಯ ಶ್ರೇಯಾಂಕದಲ್ಲಿ ಛತ್ತೀಸ್‌ಗಡ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ನೀತಿ ಆಯೋಗದ 2020–21ನೇ ವರದಿ ತಿಳಿಸಿದೆ.

ಕಳೆದ ವರ್ಷ ಛತ್ತೀಸ್‌ಗಡ ರಾಜ್ಯವು ಲಿಂಗಸಮಾನತೆಯ ಶ್ರೇಯಾಂಕದಲ್ಲಿ 43 ಅಂಕ ಗಳಿಸಿ, ದೇಶದಲ್ಲಿ ಏಳನೇ ಸ್ಥಾನ ಪಡೆದಿತ್ತು. ಈ ವರ್ಷ ರಾಜ್ಯವು 61 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದೆ.

ಕೇರಳವು ಎರಡನೇ ಸ್ಥಾನದಲ್ಲಿದ್ದರೆ, ಬಿಹಾರ ಕೊನೆಯ ಸ್ಥಾನದಲ್ಲಿದೆ.

ADVERTISEMENT

ವಿಶ್ವಸಂಸ್ಥೆಯ ಸಹಯೋಗದಲ್ಲಿ ಭಾರತವು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯ ಶ್ರೇಯಾಂಕವನ್ನು ಮೌಲ್ಯಮಾಪನ ಮಾಡಿದೆ.

ಜನನ ಸಮಯದಲ್ಲಿ ಲಿಂಗಾನುಪಾತ ಮತ್ತು ಸಮಾನ ಲಿಂಗ ವೇತನದಂತಹ ವಿಷಯಗಳಲ್ಲಿ ಛತ್ತೀಸ್‌ಗಡದ ಶ್ರೇಯಾಂಕದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಅಷ್ಟೇ ಅಲ್ಲದೆ, ಛತ್ತೀಸ್‌ಗಡದಲ್ಲಿ ಮಹಿಳೆಯರ ಮೇಲಿನ ಅಪರಾಧ ಮತ್ತು ಕೌಟುಂಬಿಕ ದೌರ್ಜನ್ಯದಲ್ಲಿ ಇಳಿಕೆ ಕಂಡಿದೆ.

ಛತ್ತೀಸ್‌ಗಡವು ಶುದ್ಧ ನೀರು, ನೈರ್ಮಲ್ಯ, ಸಮಾನ ಕೆಲಸ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲಕ ಅಸಮಾನತೆಯನ್ನು ನಿವಾರಣೆ ಮಾಡುವಲ್ಲಿ ಮುಂಚೂಣಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.