ADVERTISEMENT

ಚಿಕನ್ ಮತ್ತು ಮೊಟ್ಟೆ 'ಸಸ್ಯಾಹಾರ' ಎಂದು ಪರಿಗಣಿಸಲು ಒತ್ತಾಯಿಸಿದ ಶಿವಸೇನೆ ಸಂಸದ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 13:08 IST
Last Updated 17 ಜುಲೈ 2019, 13:08 IST
ಸಂಜಯ್ ರಾವತ್
ಸಂಜಯ್ ರಾವತ್   

ಮುಂಬೈ: ಕೋಳಿ ಮಾಂಸ, ಮೊಟ್ಟೆಯನ್ನು ಸಸ್ಯಾಹಾರ ಆಗಿ ಪರಿಗಣಿಸಬೇಕುಎಂದು ರಾಜ್ಯಸಭಾ ಸಂಸದ, ಶಿವಸೇನೆ ನೇತಾರ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.

ಮಂಗಳವಾರ ಮೇಲ್ಮನೆ ಕಲಾಪದಲ್ಲಿ ಆಯುರ್ವೇದದ ಪ್ರಯೋಜನಗಳಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸಂಜಯ್ ರಾವತ್ ಈ ಬೇಡಿಕೆಯೊಡ್ಡಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಸಚಿವಾಲಯ (ಆಯುಷ್), ಚಿಕನ್ ಸಸ್ಯಾಹಾರವೋ ಮಾಂಸಾಹಾರವೋ ಎಂಬುದರ ಬಗ್ಗೆ ತೀರ್ಮಾನಿಸಬೇಕು ಎಂದಿದ್ದಾರೆ.
ಒಂದು ಬಾರಿ ನಾನು ನಂದರ್‌ಬಾರ್‌ನ ಸಣ್ಣ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಆದಿವಾಸಿಗಳು ನನಗೆ ಊಟ ನೀಡಿದರು.ಇದೇನು ಎಂದು ನಾನು ಕೇಳಿದಾಗ ಇದು ಆಯುರ್ವೇದಿಕ್ ಚಿಕನ್, ಇದನ್ನು ತಿಂದರೆ ಎಲ್ಲ ರೋಗಗಳು ಮಾಯವಾಗುತ್ತವೆ. ಕೋಳಿಯನ್ನು ನಾವು ಆ ರೀತಿ ಬೆಳೆಸಿದ್ದೇವೆ ಎಂದು ಅವರು ವಿವರಿಸಿರುವುದಾಗಿಸಂಜಯ್ ಹೇಳಿದ್ದಾರೆ.

ADVERTISEMENT

ಆಯುರ್ವೇದಿಕ್ ಆಹಾರ ನೀಡಿದರೆ ಕೋಳಿಯೂ ಆಯುರ್ವೇದಿಕ್ ಮೊಟ್ಟೆಯನ್ನಿಡುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ ಎಂದ ಸಂಜಯ್ ರಾವತ್, ಇಂತಾ ಕೋಳಿಗಳು ಪ್ರೋಟೀನ್‌ಭರಿತವಾಗಿದ್ದರಿಂದ ಸಸ್ಯಾಹಾರಿಗಳೂ ಸೇವಿಸಬಹುದು ಎಂದಿದ್ದಾರೆ.

ಟ್ರೋಲ್ ಮಾಡಿದ ನೆಟ್ಟಿಗರು
ಕೋಳಿ ಮತ್ತು ಮೊಟ್ಟೆಯನ್ನು ಸಸ್ಯಾಹಾರವಾಗಿ ಪರಿಗಣಿಸುವುದಾದರೆ ಮಟನ್ ಮತ್ತು ಬೀಫ್‌ನ್ನು ಕೂಡಾ ಈ ಪಟ್ಟಿಗೆ ಸೇರಿಸಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.