ADVERTISEMENT

ಪೂರ್ವ ಲಡಾಖ್‌: ಚೀನಾದ ಇನ್ನಷ್ಟು ಸೇನೆ ವಾಪಸು

ಪಿಟಿಐ
Published 11 ಜುಲೈ 2020, 20:37 IST
Last Updated 11 ಜುಲೈ 2020, 20:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ನ‌ ಪಾಂಗೊಂಗ್ ತ್ಸೊ ಭಾಗದಿಂದಚೀನಾದ ಸೇನೆಯು ಇನ್ನಷ್ಟು ತುಕಡಿಯನ್ನು ಹಾಗೂ ಪಾಂಗೊಂಗ್‌ ನದಿಯಿಂದ ಕೆಲ ದೋಣಿಗಳನ್ನು ವಾಪಸು ಕರೆಸಿಕೊಂಡಿದೆ.

ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಸಹಜ ಪರಿಸ್ಥಿತಿ ಮೂಡಿಸುವ ರೂಪುರೇಷೆ ಅಂತಿಮಗೊಳಿಸಲು ಲೆಫ್ಟಿನಂಟ್‌ ಜನರಲ್‌ ಹಂತದ ನಡುವೆ ಇನ್ನೊಂದು ಸುತ್ತಿನ ಮಾತುಕತೆಗೆ ಸಿದ್ಧತೆ ನಡೆದಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಚೀನಾ ಮತ್ತು ಭಾರತ ಸೇನೆಯ ಯೋಧರ ನಡುವೆ ನಡೆದಿದ್ದ ಜಟಾಪಟಿ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ತಲೆತೋರಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.