ಎನ್.ಕೆ ಪ್ರೇಮಚಂದ್ರನ್
(ಪಿಟಿಐ ಚಿತ್ರ)
ತಿರುವನಂತಪುರ: ‘ಛತ್ತೀಸಗಢದಲ್ಲಿ ಬಂಧನಕ್ಕೀಡಾಗಿರುವ ಕ್ರೈಸ್ತ ಸನ್ಯಾಸಿನಿಯರನ್ನು ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ’ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಸಂಸದ ಎನ್.ಕೆ ಪ್ರೇಮಚಂದ್ರನ್ ಗುರುವಾರ ಹೇಳಿದ್ದಾರೆ.
ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಇಬ್ಬರು ಸನ್ಯಾಸಿನಿಯರ ವಿಚಾರ ಕುರಿತಂತೆ ಚರ್ಚಿಸಲು ಕೇರಳದ ಸಂಸದರ ನಿಯೋಗವು ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿತ್ತು.
ಆ ಬಳಿಕ ಮಾಧ್ಯಮಗಳ ಎದುರು ಪ್ರೇಮಚಂದ್ರನ್ ಮಾತನಾಡಿದರು. ‘ಬಂಧನಕ್ಕೀಡಾಗಿರುವ ಇಬ್ಬರು ಕ್ರೈಸ್ತ ಸನ್ಯಾಸಿನಿಯರ ಬಿಡುಗಡೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ. ಸನ್ಯಾಸಿನಿಯರು ಅಮಾಯಕರು ಎಂಬುದು ಅವರಿಗೆ ತಿಳಿದಿದೆ ಎಂಬುದು ಅವರ ಮಾತಿನ ಧಾಟಿಯಿಂದ ತಿಳಿಯುತ್ತಿತ್ತು’ ಎಂದೂ ಸಂಸದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.