ADVERTISEMENT

ಸಂಸದೆ ಕನಿಮೋಳಿಯನ್ನು ಭಾರತೀಯಳೇ ಎಂದು ಪ್ರಶ್ನಿಸಿದ ಅಧಿಕಾರಿ

ಪಿಟಿಐ
Published 9 ಆಗಸ್ಟ್ 2020, 12:03 IST
Last Updated 9 ಆಗಸ್ಟ್ 2020, 12:03 IST
ಕನಿಮೋಳಿ
ಕನಿಮೋಳಿ   

ಚೆನ್ನೈ: ‘ನಾವು ಭಾರತೀಯರಾಗಿದ್ದ ಮಾತ್ರಕ್ಕೆ ಹಿಂದಿ ಗೊತ್ತಿರಬೇಕೆಂದಿಲ್ಲ’ ಎಂದು ಡಿಎಂಕೆ ಮಹಿಳಾ ಘಟಕದ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿ ಹೇಳಿದ್ದಾರೆ.

‘ಭಾನುವಾರ ಏರ್‌ಪೋರ್ಟ್‌ನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಮಹಿಳಾ ಅಧಿಕಾರಿಯೊಬ್ಬರಿಗೆ ತಮಿಳು ಅಥವಾ ಇಂಗ್ಲಿಷಿನಲ್ಲಿ ಮಾತನಾಡಿ, ನನಗೆ ಹಿಂದಿ ಗೊತ್ತಿಲ್ಲ’ ಎಂದು ಹೇಳಿದೆ. ಅದಕ್ಕೆ ಅವರು ‘ನೀವು ಭಾರತೀಯಳೇ’ ಎಂದು ಪ್ರಶ್ನಿಸಿದರು. ಭಾರತೀಯರಾಗಿದ್ದ ಮಾತ್ರಕ್ಕೆ ಎಲ್ಲರಿಗೂ ಹಿಂದಿ ಹೇಗೆ ಬರಲು ಸಾಧ್ಯ ಎಂಬುದನ್ನು ತಿಳಿಯಬಯಸುತ್ತೇನೆ‘ ಎಂದು ಕನಿಮೋಳಿ ಕೇಳಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ #hindiimposition ಹ್ಯಾಷ್‌ಟ್ಯಾಗ್‌ನಲ್ಲಿ ಕನಿಮೋಳಿ ಟ್ವೀಟ್ ಮಾಡಿದ್ದು, ‘ತಮ್ಮ ಅಭಿಪ್ರಾಯಕ್ಕೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸಿದ್ದಾರೆ. ‘ನಾನು ಭಾರತೀಯ. ಹಿಂದಿಗೂ ನನಗೆ ಸಂಬಂಧವಿಲ್ಲ! ಎಂದೂ ಒಬ್ಬರು ಪ್ರತಿಕ್ರಿಯಿಸಿದ್ದಾರೆ’ ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.