ADVERTISEMENT

ಐಐಟಿ ಕನಸು ನನಸಾಗಿಸಿಕೊಂಡ ಶುಭಂ

ಪಿಟಿಐ
Published 30 ಏಪ್ರಿಲ್ 2019, 19:34 IST
Last Updated 30 ಏಪ್ರಿಲ್ 2019, 19:34 IST
ಶುಭಂ ಶ್ರೀವಾಸ್ತವ (ಸಂಗ್ರಹ ಚಿತ್ರ)
ಶುಭಂ ಶ್ರೀವಾಸ್ತವ (ಸಂಗ್ರಹ ಚಿತ್ರ)   

ನವದೆಹಲಿ: ‘ಚೆಸ್‌ ಆಡುವುದುನನಗಿಷ್ಟ. ತರ್ಕಬದ್ಧವಾಗಿ ಯೋಚಿಸುವ ಜಾಣ್ಮೆಯನ್ನು ಚದುರಂಗದಾಟಕಲಿಸುತ್ತದೆ. ಈ ಆಟದ ತಂತ್ರಗಾರಿಯನ್ನು ನನ್ನ ಗುರಿ ಸಾಧನೆಗೂ ಬಳಸಿಕೊಂಡೆ’...

ಇದು ಐಐಟಿ ಮತ್ತು ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಜಂಟಿ ಪ್ರವೇಶ ಪರೀಕ್ಷೆಯಲ್ಲಿ100ಕ್ಕೆ 100 ಅಂಕ ಗಳಿಸಿರುವ ಹದಿನೆಂಟು ವರ್ಷದ ಶುಭಂ ಶ್ರೀವಾಸ್ತವ ಅವರ ಮಾತು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೆಇಇ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ದೇಶದ 24 ಅಭ್ಯರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ದೆಹಲಿಯಿಂದ ಶುಭಂ ಒಬ್ಬರೇ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ADVERTISEMENT

‘ಒಳ್ಳೆಯ ಅಂಕ ಪಡೆದು ಐಐಟಿಯಲ್ಲಿ ಪ್ರವೇಶ ಪಡೆಯಬೇಕೆಂಬುದು ನನ್ನ ಗುರಿಯಾಗಿತ್ತು. ಎರಡು ವರ್ಷಗಳಿಂದ ಗುರಿ ಸಾಧನೆಗೆ ಕಠಿಣ ಶ್ರಮ ವಹಿಸಿದೆ. ಪರೀಕ್ಷೆ ಬರೆದ ನಂತರ ಅತ್ಯುತ್ತಮ ಅಂಕ ಗಳಿಸುವ ವಿಶ್ವಾಸವಿತ್ತು. ಆದರೆ 100 ಅಂಕ ಬರುತ್ತದೆ ಎಂಬ ನಂಬಿಕೆಯೇ ಇರಲಿಲ್ಲ’ ಎಂದು ಯಶಸ್ಸಿನ ಖುಷಿ ಹಂಚಿಕೊಳ್ಳುತ್ತಾರೆ.

ಶುಭಂ ದೆಹಲಿಯ ಮೌಂಟ್‌ ಕಾರ್ಮಲ್‌ ಕಾಲೇಜು ವಿದ್ಯಾರ್ಥಿ. ಇವರಿಗೆ ಕಂಪ್ಯೂಟರ್‌ ವಿಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಗಳಿಸುವ ಹಂಬಲವಿದ್ದು, ಅದನ್ನು ಪಡೆದೇ ತಿರುತ್ತೇನೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಾರೆ. ಏರ್‌ ಇಂಡಿಯಾದ ಹಿರಿಯ ಅಧಿಕಾರಿಯಾಗಿರುವ ಇವರ ತಂದೆ, ಐಐಟಿ ಹಳೆಯ ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.