ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್‌–ಎಡಪಕ್ಷಗಳ ಚರ್ಚೆ

ಪಿಟಿಐ
Published 17 ಜನವರಿ 2021, 10:04 IST
Last Updated 17 ಜನವರಿ 2021, 10:04 IST
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕುರಿತಂತೆ ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಸಭೆಯ ನಂತರ ಎಡಪಕ್ಷಗಳ ಅಧ್ಯಕ್ಷ ಬಿಮಾನ್ ಬೋಸ್ (ಬಲಭಾಗದಲ್ಲಿರುವವರು), ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. (ಪಿಟಿಐ ಚಿತ್ರ)

ಕೋಲ್ಕತ್ತ: ಕಾಂಗ್ರೆಸ್‌ ಮತ್ತು ಸಿಪಿಐ(ಎಂ)ನೇತೃತ್ವದ ಎಡಪಕ್ಷಗಳ ಹಿರಿಯ ನಾಯಕರು ಭಾನುವಾರ ಭೇಟಿಯಾಗಿದ್ದು, ಈ ವೇಳೆ ಉಭಯ ನಾಯಕರು ಸೀಟು ಹಂಚಿಕೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಈ ಎರಡೂ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿ, 294 ಸ್ಥಾನಗಳಲ್ಲಿ 76 ಸೀಟುಗಳನ್ನು ಗೆದ್ದಿದ್ದವು.

‘ಈ ತಿಂಗಳದ ಅಂತ್ಯದೊಳಗೆ ಸೀಟು ಹಂಚಿಕೆಯ ಬಗ್ಗೆ ನಿರ್ಧರಿಸಲಾಗುವುದು’ ಎಂದು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ಚೌಧರಿ ಅವರು ತಿಳಿಸಿದರು.

ADVERTISEMENT

‘ಈ ಬಾರಿಯ ಚುನಾವಣೆಯನ್ನು ನಾವು ಜತೆಯಾಗಿ ಎದುರಿಸಲಿದ್ದೇವೆ. ನಾವು ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಯಾವುದೇ ವಿಷಯದ ಬಗ್ಗೆ ಭಿನ್ನಭಿಪ್ರಾಯಗಳು ವ್ಯಕ್ತವಾಗಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.