ADVERTISEMENT

ಕೇರಳ | ವನ್ಯಜೀವಿ ದಾಳಿ; ಸಂಸತ್ ಆವರಣದಲ್ಲಿ ರಾಹುಲ್, ಪ್ರಿಯಾಂಕಾ ಪ್ರತಿಭಟನೆ

ಪಿಟಿಐ
Published 13 ಫೆಬ್ರುವರಿ 2025, 6:25 IST
Last Updated 13 ಫೆಬ್ರುವರಿ 2025, 6:25 IST
<div class="paragraphs"><p>ಕಾಂಗ್ರಸ್ ಸಂಸದರಿಂದ ಪ್ರತಿಭಟನೆ</p></div>

ಕಾಂಗ್ರಸ್ ಸಂಸದರಿಂದ ಪ್ರತಿಭಟನೆ

   

(ಪಿಟಿಐ ಚಿತ್ರ)

ನವದೆಹಲಿ: ಕೇರಳದಲ್ಲಿ ವನ್ಯಜೀವಿಗಳ ದಾಳಿ ಮತ್ತು ಮರಳು ಗಣಿಗಾರಿಕೆಯಿಂದ ಕರಾವಳಿ ಪ್ರದೇಶದ ಜನರನ್ನು ರಕ್ಷಣೆ ಮಾಡಬೇಕೆಂಬ ಉದ್ದೇಶದೊಂದಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಸಂಸದರು ಇಂದು (ಗುರುವಾರ) ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

'ವಯನಾಡಿನಲ್ಲಿ ಡಿಸೆಂಬರ್ 27ರ ನಂತರ ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದಾಗಿ 11 ಮಂದಿ ಮೃತಪಟ್ಟಿದ್ದಾರೆ. ಇದು ಅತ್ಯಂತ ಕಳವಳಕಾರಿ ಪರಿಸ್ಥಿತಿಯಾಗಿದೆ' ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

'ಈ ಸಮಸ್ಯೆಯನ್ನು ಎದುರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಅನುದಾನವನ್ನು ನೀಡಬೇಕಿದೆ. ಸ್ಥಳೀಯರೊಂದಿಗೆ ನಾನು ಮಾತನಾಡಿದಾಗ ಅವರು ಸಾಧ್ಯವಾದಷ್ಟು ಮಾಡುತ್ತಿದ್ದಾರೆ. ಆದರೆ ಅನುದಾನದ ಕೊರತೆಯಿದೆ' ಎಂದು ಅವರು ತಿಳಿಸಿದ್ದಾರೆ.

ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸಂಸದರು ವನ್ಯಜೀವಿ ದಾಳಿ ಮತ್ತು ಮರಳು ಗಣಿಗಾರಿಕೆಯಿಂದ ನಾಗರಿಕರನ್ನು ರಕ್ಷಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ.

'ತೀರ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಮಾಡುವುದರಿಂದ ಮೀನುಗಾರರ ಸಮುದಾಯದ ಬದುಕಿಗೂ ಆಪತ್ತು ಎದುರಾಗಿದೆ. ಪರಿಸರ ಹಾಗೂ ಮೀನುಗಾರರ ಸಂರಕ್ಷಣೆಗೆ ಕೇಂದ್ರ ಸರ್ಕಾರವು ಮರಳು ಗಣಿಗಾರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.