ADVERTISEMENT

ದೆಹಲಿ ಚುನಾವಣೆ | ಎಎ‍ಪಿ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದ ಅಲ್ಕಾ ಲಾಂಬ

ಏಜೆನ್ಸೀಸ್
Published 8 ಫೆಬ್ರುವರಿ 2020, 7:27 IST
Last Updated 8 ಫೆಬ್ರುವರಿ 2020, 7:27 IST
   

ನವದೆಹಲಿ:ಎಎಪಿ ಪಕ್ಷದ ಮಾಜಿ ಶಾಸಕಿ ಮತ್ತುಕಾಂಗ್ರೆಸ್‌ ಅಭ್ಯರ್ಥಿ ಅಲ್ಕಾ ಲಾಂಬ ಅವರುತಮ್ಮ ಬಗ್ಗೆ ಮಾತನಾಡಿದ ಎಎಪಿ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದ ಘಟನೆ ಶನಿವಾರ ನಡೆದಿದೆ.

ಚಾಂದಿನಿ ಚೌಕ್‌ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಲಾಂಬ ಇಲ್ಲಿನ ಮಂಜು ಕಾ–ತಿಲ್ಲಾ ಬಳಿಯ ಟಾಗೋರ್‌ ಗಾರ್ಡನ್‌ ಮತಗಟ್ಟೆ ಸಂಖ್ಯೆ 161ರಲ್ಲಿ ಮತಚಲಾಯಿಸಿದರು. ಈ ವೇಳೆ ತಮ್ಮ ಮಗನ ಬಗ್ಗೆ ಮಾತನಾಡಿದ ವ್ಯಕ್ತಿಗೆ ಹೊಡೆಯಲು ಲಾಂಬ ಮುಂದಾಗಿದ್ದಾರೆ. ಅಷ್ಟರಲ್ಲಿಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಬಳಿಕ ಆ ವ್ಯಕ್ತಿಯ ವಿರುದ್ಧ ಕೂಗಾಡಿಕಣ್ಣೀರು ಹಾಕಿದ ಅವರು, ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ADVERTISEMENT

ಲಾಂಬಕಳೆದ ಬಾರಿಯೂ ಚಾಂದಿನಿ ಚೌಕ್‌ನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರಿಗೆಎಎಪಿಯಪ್ರಹ್ಲಾದ್‌ ಸಿಂಗ್‌ ಸಾಹ್ನಿ ಮತ್ತು ಬಿಜೆಪಿಯ ಸುಮಬನ್‌ ಗುಪ್ತಾ ಎದುರಾಳಿಯಾಗಿದ್ದಾರೆ.

ಇಂದು ಸಂಜೆ 6 ಗಂಟೆ ವರೆಗೆ ಮತದಾನ ಮುಂದುವರಿಯಲಿದ್ದು, ಫಲಿತಾಂಶ ಇದೇ ತಿಂಗಳ 11 ರಂದು ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.