ADVERTISEMENT

ಕಾಂಗ್ರೆಸ್‌ ಮುಖಂಡ ಕೀರ್ತಿ ಆಜಾದ್‌ ಟಿಎಂಸಿಗೆ ಸೇರ್ಪಡೆ

ಪಿಟಿಐ
Published 23 ನವೆಂಬರ್ 2021, 14:00 IST
Last Updated 23 ನವೆಂಬರ್ 2021, 14:00 IST
ಕೀರ್ತಿ ಆಜಾದ್‌ ಅವರನ್ನು ಮಮತಾ ಬ್ಯಾನರ್ಜಿ ಅವರು ಮಂಗಳವಾರ ಟಿಎಂಸಿಗೆ ಬರಮಾಡಿಕೊಂಡರು–ಪಿಟಿಐ ಚಿತ್ರ
ಕೀರ್ತಿ ಆಜಾದ್‌ ಅವರನ್ನು ಮಮತಾ ಬ್ಯಾನರ್ಜಿ ಅವರು ಮಂಗಳವಾರ ಟಿಎಂಸಿಗೆ ಬರಮಾಡಿಕೊಂಡರು–ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್‌ ಮುಖಂಡ ಕೀರ್ತಿ ಆಜಾದ್‌ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಮಂಗಳವಾರ ಇಲ್ಲಿ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಸೇರ್ಪಡೆಯಾದರು.

ಜೆಡಿಯು ಮಾಜಿ ಪ್ರಧಾನ ಕಾರ್ಯದರ್ಶಿ ಪವನ್‌ ವರ್ಮಾ, 2019ರಲ್ಲಿ ಕಾಂಗ್ರೆಸ್ ತೊರೆದಿದ್ದ ಅಶೋಕ್‌ ತನ್ವರ್‌ ಕೂಡ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.

‘ಬಿಜೆಪಿಯ ವಿಭಜನೆಯ ರಾಜಕೀಯದ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ. ಇಂದು ದೇಶಕ್ಕೆ ಮಮತಾ ಅವರಂತಹ ನಾಯಕರ ಅಗತ್ಯವಿದೆ’ ಎಂದು ಅಜಾದ್‌ ಹೇಳಿದ್ದಾರೆ.

ADVERTISEMENT

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮಾಜಿ ಸಲಹೆಗಾರರಾದ ವರ್ಮಾ ಅವರನ್ನು 2020ರಲ್ಲಿ ಜೆಡಿಯುನಿಂದ ವಜಾಗೊಳಿಲಾಗಿತ್ತು.

‘ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಮಮತಾ ಅವರ ಸಾಮರ್ಥ್ಯವನ್ನು ಕಂಡು ಟಿಎಂಸಿಗೆ ಸೇರ್ಪಡೆಯಾಗಿದ್ದೇನೆ’ ಎಂದು ವರ್ಮಾ ಅವರು ತಿಳಿಸಿದ್ದಾರೆ.

ಅಶೋಕ್‌ ತನ್ವರ್‌ ಅವರು ಕಾಂಗ್ರೆಸ್‌ನ ಹರಿಯಾಣ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.