ADVERTISEMENT

ಇಂದು ರಾಹುಲ್ ಜನ್ಮದಿನ | ಸೋನಿಯಾ ಗಾಂಧಿ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆ

ಪಿಟಿಐ
Published 19 ಜೂನ್ 2025, 7:35 IST
Last Updated 19 ಜೂನ್ 2025, 7:35 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸರ್‌ ಗಂಗಾ ರಾಮ್ ಆಸ್ಪತ್ರೆಯ ಮೂಲಗಳು ಗುರುವಾರ (ಜೂನ್ 19) ತಿಳಿಸಿವೆ.

78 ವರ್ಷದ ಸೋನಿಯಾ ಅವರು ಹೊಟ್ಟೆ ನೋವಿನಿಂದಾಗಿ ಜೂನ್‌ 15ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಸೋನಿಯಾ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮುಖಸ್ಥ ಡಾ. ಅಜಯ್‌ ಸ್ವರೂಪ್ ತಿಳಿಸಿದ್ದಾರೆ.

ADVERTISEMENT

'ಅವರ ಆರೋಗ್ಯ ಸ್ಥಿರವಾಗಿದೆ. ನಿರಂತರ ಚಿಕಿತ್ಸೆಯ ಭಾಗವಾಗಿ ಒಂದು ನಿರ್ದಿಷ್ಟ ಆರೋಗ್ಯ ಕ್ರಮವನ್ನು ರೂಪಿಸಲಾಗಿದೆ. ವೈದ್ಯರ ಒಂದು ತಂಡ ಸೋನಿಯಾ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ' ಎಂಬುದಾಗಿ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆಯಾದರೂ, ಆಸ್ಪತ್ರೆಯಿಂದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಂಪೂರ್ಣ ಚೇತರಿಕೆ ನಂತರ ತೀರ್ಮಾನ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.

ರಾಹುಲ್ ಜನ್ಮದಿನ
ಸೋನಿಯಾ ಗಾಂಧಿ ಅವರ ಪುತ್ರ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ 55ನೇ ಜನ್ಮದಿನ ಇಂದು (ಜೂನ್ 19) . ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಶುಭ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.