ADVERTISEMENT

Delhi Elections 2025: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಪ್ರಮುಖ ಭರವಸೆಗಳೇನು?

ಪಿಟಿಐ
Published 29 ಜನವರಿ 2025, 8:28 IST
Last Updated 29 ಜನವರಿ 2025, 8:28 IST
<div class="paragraphs"><p>ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ</p></div>

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

   

(ಚಿತ್ರ ಕೃಪೆ: X/@INCIndia)

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಇಂದು (ಬುಧವಾರ) ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.

ADVERTISEMENT

ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, 22 ಅಂಶಗಳ ವಿಭಾಗಗಳಾಗಿ ವಿಂಗಡಿಸಲಾಗಿದೆ.

ಪ್ರಮುಖ ಭರವಸೆಗಳು:

  • ಅಧಿಕಾರಕ್ಕೆ ಬಂದರೆ ಜಾತಿಗಣತಿ,

  • ಪೂರ್ವಾಂಚಲದವರಿಗಾಗಿ ಸಚಿವಾಲಯ,

  • ಮಹಿಳೆಯರಿಗೆ ಮಾಸಿಕ ₹2,500,

  • 300 ಯುನಿಟ್‌ವರೆಗೆ ಉಚಿತ ವಿದ್ಯುತ್,

  • ₹500ಗೆ ಎಲ್‌ಪಿಜಿ ಸಿಲಿಂಡರ್,

  • ₹25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ,

  • ಉಚಿತ ರೇಷನ್ ಕಿಟ್,

  • ನಿರುದ್ಯೋಗಿ ವಿದ್ಯಾವಂತ ಯುವಜನತೆಗೆ ಒಂದು ವರ್ಷದವರೆಗೆ ಮಾಸಿಕ ₹8,500,

  • 100 ಇಂದಿರಾ ಕ್ಯಾಂಟೀನ್ (₹5ಗೆ ಊಟ),

  • ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.