ADVERTISEMENT

ಗುಜರಾತ್‌ನಲ್ಲಿ 18ರಿಂದ 20 ಲಕ್ಷ ನಕಲಿ ಮತದಾರರು: ಕಾಂಗ್ರೆಸ್ ಆರೋಪ

ಮತದಾರರ ಪಟ್ಟಿಯಲ್ಲಿ 18ರಿಂದ 20 ಲಕ್ಷ ನಕಲಿ ಮತದಾರರು ಇರುವ ಆರೋಪ ಮಾಡಿದ ಕಾಂಗ್ರೆಸ್

ಐಎಎನ್ಎಸ್
Published 21 ಆಗಸ್ಟ್ 2022, 1:55 IST
Last Updated 21 ಆಗಸ್ಟ್ 2022, 1:55 IST
   

ಗಾಂಧಿನಗರ: ಗುಜರಾತ್‌ನ ಮತದಾರರ ಪಟ್ಟಿಯಲ್ಲಿ 18 ರಿಂದ 20 ಲಕ್ಷದಷ್ಟು ನಕಲಿ ಮತದಾರರು ಇದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಆರೋಪಿಸಿದ್ದಾರೆ.

ನಕಲಿ ಮತದಾರರು, ಚುನಾವಣೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮತದಾರರ ಪಟ್ಟಿಯಿಂದ ಆ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿ. ಜೆ. ಚಾವ್ಡ ಒತ್ತಾಯಿಸಿದ್ದಾರೆ.

ಗಾಂಧಿನಗರದಲ್ಲಿ ಮಾತನಾಡಿರುವ ಅವರು, ಮೆಹ್ಸಾನ ವಿಧಾನಸಭಾ ಕ್ಷೇತ್ರದಲ್ಲೇ 11,000 ನಕಲಿ ಮತದಾರರು ಇದ್ದಾರೆ. ಬೂತ್ ನಂಬರ್ 1ರಲ್ಲಿ 22 ನಕಲಿ ಮತದಾರರಿದ್ದಾರೆ ಎಂದು ಚಾವ್ಡ ಹೇಳಿದ್ದಾರೆ.

ADVERTISEMENT

ನಕಲಿ ಮತದಾರರನ್ನು ಪತ್ತೆಹಚ್ಚಲು ಕಷ್ಟವೇನಿಲ್ಲ. ಪ್ರತಿ ಬ್ಲಾಕ್‌ನಲ್ಲಿ ಕೂಡ ನಿರ್ದಿಷ್ಟ ಸಂಖ್ಯೆಯ ಮನೆಗಳಿದ್ದು, ಅವುಗಳ ಪ್ರಕಾರ ಇಷ್ಟೇ ಮತಗಳಿರುತ್ತವೆ. ಆದರೆ, ನಕಲಿ ಮತದಾರರ ಹೆಸರು ಪಟ್ಟಿಯಲ್ಲಿ ಸೇರಿಕೊಂಡಿರುವುದರಿಂದ, ಚುನಾವಣೆಯಲ್ಲಿ ಅಕ್ರಮ ನಡೆಯುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.