ADVERTISEMENT

ಕೇರಳ ಪ್ರವಾಹ: ‘ವಿದೇಶಗಳಲ್ಲಿ ಭಿಕ್ಷಾಪಾತ್ರೆ ಬೇಡ’ –ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ
Published 3 ಸೆಪ್ಟೆಂಬರ್ 2018, 19:30 IST
Last Updated 3 ಸೆಪ್ಟೆಂಬರ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ತಿರುವನಂತಪುರ: ಪ್ರವಾಹದಿಂದ ನಲುಗಿರುವ ಕೇರಳದ ಮರು ನಿರ್ಮಾಣಕ್ಕೆ ಅನಿವಾಸಿ ಕೇರಳೀಯರಿಂದ ಸಂಪನ್ಮೂಲ ಕ್ರೋಡೀಕರಿಸಲು, ರಾಜ್ಯ ಸರ್ಕಾರವು ಸಚಿವರು ಮತ್ತು ಅಧಿಕಾರಿಗಳ ತಂಡವನ್ನು ವಿದೇಶಗಳಿಗೆ ಕಳುಹಿಸುತ್ತಿರುವುದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ನ ರಾಜ್ಯ ನಾಯಕರು, ಸಚಿವರು ವಿದೇಶ ಪ್ರವಾಸವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

‘ವಿದೇಶಗಳಲ್ಲಿ ಕೇರಳ ಮೂಲದವರು ಆತ್ಮಾಭಿಮಾನದಿಂದ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದು ಅಲ್ಲಿಗೆ ಹೋಗಿ ಬೇಡುವ ಮೂಲಕ, ಭಾರತೀಯರು ಮತ್ತು ಕೇರಳೀಯರಿಗೆ ಅವಮಾನ ಮಾಡಬಾರದು’ ಎಂದು ಪಕ್ಷದ ನಾಯಕರಾದ ಕೆ.ವಿ.ಥಾಮಸ್‌ ಒತ್ತಾಯಿಸಿದ್ದಾರೆ.

ADVERTISEMENT

‘ಇದು ವಿದೇಶ ಪ್ರವಾಸ ಮಾಡುವ ಕಾಲವಲ್ಲ. ಸಚಿವರು ರಾಜ್ಯದಲ್ಲೇ ಇದ್ದುಕೊಂಡು ಪುನರ್ವಸತಿ ಕಾರ್ಯದ ಹೊಣೆ ಹೊರಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.