
ಪಿಟಿಐ
ಚೆನ್ನೈ: ‘ಇಂಡಿಯನ್–2’ ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ, ವಿಚಾರಣೆಗಾಗಿ ನಟ ಕಮಲ್ ಹಾಸನ್ ಮಂಗಳವಾರ ಪೊಲೀಸರ ಮುಂದೆ ಹಾಜರಾದರು.
ಫೆಬ್ರುವರಿ 20ರಂದು ಚಿತ್ರೀಕರಣದ ವೇಳೆ ಕ್ರೇನ್ ಕುಸಿದು, ಸಹಾಯಕ ನಿರ್ದೇಶಕ ಸೇರಿದಂತೆ ಮೂವರು ಮೃತಪಟ್ಟಿದ್ದರು.
ಪ್ರಕರಣ ಸಂಬಂಧ ಕಮಲ್ ಹಾಸನ್ ಅವರಿಗೆ ಕೇಂದ್ರ ಕ್ರೈಂ ಬ್ರ್ಯಾಂಚ್ ನೋಟಿಸ್ ಜಾರಿಮಾಡಿತ್ತು. ಸಿನಿಮಾದ ನಿರ್ದೇಶಕ ಶಂಕರ್ ಅವರ ವಿಚಾರಣೆ ಈಗಾಗಲೇ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.