ADVERTISEMENT

ಕೊರೊನಾ ಸೋಂಕು ಪ್ರಮಾಣ: ಕರ್ನಾಟಕ, ಬಿಹಾರದಲ್ಲಿ ಅಧಿಕ

ಕೊರೊನಾ ಸೋಂಕು ಪ್ರಸರಣ ಏರಿಕೆ ದರ: ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು

​ಪ್ರಜಾವಾಣಿ ವಾರ್ತೆ
Published 29 ಮೇ 2020, 19:32 IST
Last Updated 29 ಮೇ 2020, 19:32 IST
   

ನವದೆಹಲಿ: ಕರ್ನಾಟಕ ಮತ್ತು ಬಿಹಾರ ರಾಜ್ಯಗಳಲ್ಲಿ ಕಳೆದ ಎರಡು ವಾರಗಳ ಅವಧಿಯಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಈ ಏರಿಕೆ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ ಎಂದು ಈ ಕುರಿತು ಅಧ್ಯಯನ ಕೈಗೊಂಡಿರುವ ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ.

ನಂತರದ ಸ್ಥಾನದಲ್ಲಿ ಒಡಿಶಾ ಇದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಮೇ 16 ರಿಂದ 24ರ ಅವಧಿಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿನ ಹೆಚ್ಚಳದ ಸರಾಸರಿ 1.62 ಇತ್ತು. ಅದೇ ರಾಷ್ಟ್ರದ ಸರಾಸರಿ 1.23 ಇತ್ತು. ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಕಂಡು ಬಂದ ಹೆಚ್ಚಳದ ಪ್ರಮಾಣ 1.27, ತಮಿಳುನಾಡು– 1.56 ಇತ್ತು ಎಂದು ಚೆನ್ನೈ ಮೂಲದ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥಮ್ಯಾಟಿಕಲ್‌ ಸೈನ್ಸ್‌ನ ವಿಜ್ಞಾನಿ ಸೀತಾಭ್ರ ಸಿನ್ಹಾ ವಿವರಿಸಿದ್ದಾರೆ.

ADVERTISEMENT

ಸಿನ್ಹಾ ಅವರು ಸಂಖ್ಯಾಶಾಸ್ತ್ರದ ಆಧಾರದಲ್ಲಿ ಅಧ್ಯಯನ ನಡೆಸಿದ್ದಾರೆ. ಇದನ್ನು ‘ಇಂಡಿಯನ್‌ ಡಿಸೀಸ್‌ ಪ್ರಿಡಿಕ್ಷನ್‌ ಮಾಡೆಲ್‌’ ಎಂದೂ ಕರೆಯಲಾಗುತ್ತದೆ. ದೇಶದಲ್ಲಿ ಕೊರೊನಾ ಸೋಂಕು ಎಷ್ಟು ತೀವ್ರವಾಗಿ ಹರಡುತ್ತಿದೆ ಎಂಬುದನ್ನು ಸಂಖ್ಯಾಶಾಸ್ತ್ರದ ಸೂತ್ರಗಳ ಆಧಾರದಲ್ಲಿ ವಿಶ್ಲೇಷಿಸಿ, ಮುನ್ಸೂಚನೆ ನೀಡುವ ವಿಧಾನ ಇದಾಗಿದೆ.

‘ಮೇ 30ರ ವೇಳೆಗೆ ದೇಶದಲ್ಲಿ ಒಂದು ಲಕ್ಷ ಸಕ್ರಿಯ ಪ್ರಕರಣಗಳು ಕಂಡು ಬರುತ್ತವೆ’ ಎಂದು ಸಿನ್ಹಾ ಅಂದಾಜಿಸಿ
ದ್ದಾರೆ. ಈಗಾಗಲೇ ದೇಶದಲ್ಲಿ 90 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇರುವುದು ಈ ವಿಶ್ಲೇಷಣೆಗೆ ಪುಷ್ಟಿ ನೀಡುತ್ತದೆ ಎಂದೇ ಹೇಳಲಾಗುತ್ತದೆ.

‘ಸಾಧಾರಣವಾಗಿ ಸಕ್ರಿಯ ಪ್ರಕರಣಗಳು ಬೆಳಕಿಗೆ ಬರಲು 10ರಿಂದ ಎರಡು ವಾರ ಕಾಲ ಬೇಕು. ಈ ಆಧಾರದಲ್ಲಿ ಹೇಳುವುದಾದರೆ ಬಿಹಾರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಲು ಕಾರಣವಾದ ಅಂಶಗಳು ಏಪ್ರಿಲ್‌ 24–28ರ ನಡುವೆ ಕಂಡು ಬಂದವು. ಕರ್ನಾಟಕದ ಸಂದರ್ಭದಲ್ಲಿ ಇಂತಹ ಅಂಶಗಳು ಮೇ 2–5ರ ಅವಧಿಯಲ್ಲಿ ಕಂಡು ಬಂದವು‘ ಎಂದು ಸಿನ್ಹಾ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.