ADVERTISEMENT

ದೇಶದ 4291 ಕೊರೊನಾ ಪ್ರಕರಣಗಳಿಗೆ ತಬ್ಲಿಗಿ ಜಮಾತ್‌ ಸಭೆ ನಂಟು: ಆರೋಗ್ಯ ಸಚಿವಾಲಯ

ಪಿಟಿಐ
Published 18 ಏಪ್ರಿಲ್ 2020, 14:43 IST
Last Updated 18 ಏಪ್ರಿಲ್ 2020, 14:43 IST
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್   

ನವದೆಹಲಿ: ದೇಶದಲ್ಲಿ ದೃಢಪಟ್ಟಿರುವ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಪೈಕಿ 4,291 (ಶೇ 29.8) ದೆಹಲಿಯ ನಿಜಾಮುದ್ದೀನ್‌ನ ತಬ್ಲಿಗಿ ಜಮಾತ್‌ ಸಭೆಯಿಂದ ಹರಡಿರುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಪ್ರಕರಣಗಳು 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿವೆ.

ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವ ತಮಿಳುನಾಡು (ಶೇ 84), ತೆಲಂಗಾಣ (ಶೇ 79), ದೆಹಲಿ (ಶೇ 63), ಉತ್ತರ ಪ್ರದೇಶ (ಶೇ 59) ಮತ್ತು ಆಂಧ್ರ ಪ್ರದೇಶದಂತಹ (ಶೇ 61) ರಾಜ್ಯಗಳಲ್ಲೇ ತಬ್ಲಿಗಿ ಜಮಾತ್‌ ನಂಟಿನಿಂದ ಸೋಂಕು ಹರಡಿರುವವರ ಸಂಖ್ಯೆ ಹೆಚ್ಚಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.

ಕಡಿಮೆ ಪ್ರಕರಣಗಳು ದಾಖಲಾಗಿರುವ ಕೆಲವು ರಾಜ್ಯಗಳಲ್ಲಿಯೂ ತಬ್ಲಿಗಿ ಜಮಾತ್‌ ಸಭೆಯಿಂದ ಸೋಂಕು ಹರಡಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಉದಾಹರಣೆಗೆ, ಅರುಣಾಚಲ ಪ್ರದೇಶದಲ್ಲಿ ಈವರೆಗೆ ದಾಖಲಾಗಿರುವ ಒಂದೇ ಒಂದು ಕೊರೊನಾ ಪ್ರಕರಣ ತಬ್ಲಿಗಿ ಜಮಾತ್‌ ಸಭೆಗೆ ಸಂಬಂಧಿಸಿದ್ದಾಗಿದೆ. ಅಸ್ಸಾಂನ 35ರ ಪೈಕಿ 32, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 12ರಲ್ಲಿ 10 ಪ್ರಕರಣಗಳು ತಬ್ಲಿಗಿ ಜಮಾತ್‌ ಸಭೆಗೆ ಸಂಬಂಧಿಸಿದ್ದು ಎಂದು ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.