ADVERTISEMENT

ಡ್ರಗ್ಸ್‌ ಪ್ರಕರಣ: ರಿಯಾ, ಶೋವಿಕ್ ಜಾಮೀನು ಅರ್ಜಿ ವಿಚಾರಣೆಯ ಆದೇಶ ನಾಳೆ

ಪಿಟಿಐ
Published 10 ಸೆಪ್ಟೆಂಬರ್ 2020, 12:05 IST
Last Updated 10 ಸೆಪ್ಟೆಂಬರ್ 2020, 12:05 IST
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ   

ಮುಂಬೈ: ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿರುವ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್‌ ಅವರ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಮುಂಬೈನ ವಿಶೇಷ ನ್ಯಾಯಾಲಯ ಶುಕ್ರವಾರ ಹೊರಡಿಸುವ ಸಾಧ್ಯತೆ ಇದೆ.

ನ್ಯಾಯಮೂರ್ತಿ ಜಿ.ಬಿ.ಗೌರವ್ ಅವರು ಗುರುವಾರ ಆರೋಪಿಗಳ ಪರ ವಕೀಲರು ಹಾಗೂ ಸರ್ಕಾರದ ಪರ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ವಾದಗಳನ್ನು ಆಲಿಸಿದರು. ಇದೇ ವೇಳೆ ಇನ್ನೂ ನಾಲ್ವರು ಆರೋಪಿಗಳ ಜಾಮಿನು ಅರ್ಜಿಗಳ ವಿಚಾರಣೆಯೂ ನಡೆಯಿತು.

ಎಲ್ಲಾ ಜಾಮೀನು ಅರ್ಜಿಗಳ ಕುರಿತ ಆದೇಶವನ್ನುನ್ಯಾಯಾಲಯ ಶುಕ್ರವಾರ ಹೊರಡಿಸುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.