ನವದೆಹಲಿ: ಸತತ ನಾಲ್ಕು ದಿನಗಳ ಬಳಿಕ ದೇಶದಲ್ಲಿ ಕೋವಿಡ್-19 ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷಕ್ಕಿಂತಲೂ ಕೆಳಗಿಳಿದಿದ್ದು, ಕಳೆದ 24 ತಾಸುಗಳಲ್ಲಿ 3,66,161 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಅವಧಿಯಲ್ಲಿ ಸೋಂಕಿನಿಂದ 3,754 ಮಂದಿ ಮೃತಪಟ್ಟಿದ್ದಾರೆ. ಕಳೆದೆರಡು ದಿನಗಳಿಂದಲೂ ಸಾವಿನ ಸಂಖ್ಯೆ 4,000ಕ್ಕೂ ಹೆಚ್ಚು ವರದಿಯಾಗಿತ್ತು.
ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ದೇಶದಲ್ಲಿ ಒಟ್ಟು 2,26,62,575 ಕೋವಿಡ್ ಸೋಂಕು ಪ್ರಕರಣಗಳು ದೃಢಗೊಂಡಿದೆ. ಹಾಗೆಯೇ ಒಟ್ಟು ಮೃತಪಟ್ಟವರ ಸಂಖ್ಯೆ 2,46,116ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ದೇಶದಲ್ಲಿ 37,45,237 ಪ್ರಕರಣಗಳು ಸಕ್ರಿಯವಾಗಿವೆ. ಇದು ಒಟ್ಟು ಪ್ರಕರಣಗಳ ಶೇಕಡಾ 16.53ರಷ್ಟಿದ್ದು, ಚೇತರಿಕೆ ಪ್ರಮಾಣವು ಶೇಕಡಾ 82.39ರಷ್ಟು ದಾಖಲಾಗಿದೆ.
ಈ ವರೆಗೂ ಸೋಂಕಿನಿಂದ 1,86,71,222 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇಕಡಾ 1.09ರಷ್ಟಿದೆ ಎಂದು ಅಂಕಿಅಂಶಗಳು ತಿಳಿಸಿವೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಭಾನುವಾರದಂದು 14,74,606 ಸೇರಿದಂತೆ ದೇಶದಾದ್ಯಂತ ಈ ವರೆಗೆ 30,37,50,077 ಮಾದರಿಗಳನ್ನು ಪರಿಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.