ನವದೆಹಲಿ: ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 92,605 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 1,133 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈವರೆಗೆ 54,00,620 ಜನರಿಗೆ ಸೋಂಕು ತಗುಲಿದ್ದು, 86,752 ಮಂದಿ ಅಸುನೀಗಿದ್ದಾರೆ. 43,03,044 ಜನ ಗುಣಮುಖರಾಗಿದ್ದಾರೆ. 10,10,824 ಸಕ್ರಿಯ ಪ್ರಕರಣಗಳಿವೆ.
ಸದ್ಯ ಮಹಾರಾಷ್ಟ್ರದಲ್ಲಿ 3,01,273, ಕರ್ನಾಟಕದಲ್ಲಿ 1,01,148, ಆಂಧ್ರಪ್ರದೇಶದಲ್ಲಿ 84,423, ಉತ್ತರ ಪ್ರದೇಶದಲ್ಲಿ 67,825 ಹಾಗೂ ತಮಿಳುನಾಡಿನಲ್ಲಿ 46,506 ಸಕ್ರಿಯ ಪ್ರಕರಣಗಳಿವೆ.
ಸೆಪ್ಟೆಂಬರ್ 19ರ ವರೆಗೆ ದೇಶದಲ್ಲಿ 6.36 ಕೋಟಿಗೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಶನಿವಾರ 12,06,806 ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ ದಿನವೊಂದರಲ್ಲಿ ನಡೆಸಲಾದ ಗರಿಷ್ಠ ಪರೀಕ್ಷೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.