ADVERTISEMENT

ಕೋವಿಡ್ ಪರಿಸ್ಥಿತಿ ಕೈಮೀರಿದರೆ ಲಾಕ್‌ಡೌನ್‌ ಬಿಟ್ಟು ಬೇರೆದಾರಿಯಿಲ್ಲ -ಕೇಜ್ರಿವಾಲ್

ಏಜೆನ್ಸೀಸ್
Published 11 ಏಪ್ರಿಲ್ 2021, 8:50 IST
Last Updated 11 ಏಪ್ರಿಲ್ 2021, 8:50 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಹದಗೆಟ್ಟರೆ ಲಾಕ್‌ಡೌನ್‌ ಹೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ʼಲಾಕ್‌ಡೌನ್‌ ಜಾರಿಗೊಳಿಸುವ ಉದ್ದೇಶ ದೆಹಲಿ ಸರ್ಕಾರಕ್ಕಿಲ್ಲ. ಆದರೆ, ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಹದಗೆಟ್ಟರೆ, ನಮಗೆ ಬೇರೆ ದಾರಿ ಇಲ್ಲʼ ಎಂದಿದ್ದಾರೆ.

ಇದಕ್ಕೂ ಮೊದಲು,ದೆಹಲಿಯಲ್ಲಿ ಸೋಂಕು ದೃಢಪಟ್ಟಿರುವ ಶೇ.65 ಮಂದಿ45 ವರ್ಷಕ್ಕಿಂತ ಕೆಳಗಿನವರು ಎಂದು ಹೇಳಿದಕೇಜ್ರಿವಾಲ್‌, ಕೇಂದ್ರ ಸರ್ಕಾರವು ಲಸಿಕೆ ಅಭಿಯಾನದಲ್ಲಿನ ವಯಸ್ಸಿನ ನಿರ್ಬಂಧವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ADVERTISEMENT

ಮುಂದುವರಿದು,ಜನರು ಆಸ್ಪತ್ರೆಗಳಿಗೆ ತೆರಳುವ ಮುನ್ನ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಯ ಬಗ್ಗೆ ಆ್ಯಪ್ ಮೂಲಕ ತಿಳಿದುಕೊಳ್ಳಿ. ತುರ್ತು ಪರಿಸ್ಥಿತಿ ಇದ್ದರೆ ಮಾತ್ರವೇ ಹಾಸಿಗೆ ತೆಗೆದುಕೊಳ್ಳಿ ಎಂದೂ ಮನವಿ ಮಾಡಿದರು.

ಮಹಾರಾಷ್ಟ್ರದಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣಿಸುವವರು 72 ಗಂಟೆಗೂ ಮೊದಲು ಮಾಡಿಸಿದ ಕೋವಿಡ್-‌19 ಪರೀಕ್ಷೆಯ ನೆಗಟಿವ್‌ ವರದಿಯನ್ನು ಕಡ್ಡಾಯವಾಗಿ ತರಬೇಕು ಎಂದು ದೆಹಲಿ ವಿಪತ್ತು ನಿರ್ವಹಣಾಪ್ರಾಧಿಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸದ್ಯ ದೆಹಲಿಯಲ್ಲಿ28,773 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.