ADVERTISEMENT

ಅಮೆರಿಕದಿಂದ ಭಾರತಕ್ಕೆ ಆಗಮಿಸಿದ 73 ಜನರಲ್ಲಿ 21 ಮಂದಿ ಕೊರೊನಾ ಸೋಂಕಿತರು

ಏಜೆನ್ಸೀಸ್
Published 24 ಮೇ 2020, 7:47 IST
Last Updated 24 ಮೇ 2020, 7:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಂಚಕುಲ (ಹರಿಯಾಣ):ಮೇ 19ರಂದು ಅಮೆರಿಕದಿಂದಭಾರತಕ್ಕೆ ಆಗಮಿಸಿರುವ 73 ಜನರಲ್ಲಿ 21 ಮಂದಿ ಕೊರೊನಾ ಸೋಂಕಿತರೆಂದು ದೃಢಪಟ್ಟಿದೆ.

ಜಗತ್ತಿನಲ್ಲೇ ಅತಿಹೆಚ್ಚು ಕೊರೊನಾ ಸೋಂಕಿತರಿರುವ ಅಮೆರಿಕದಿಂದ ಮೇ 19ರಂದು ಹರಿಯಾಣದ ಪಂಚಕುಲಕ್ಕೆ 73 ಜನರು ವಿಮಾನದ ಮೂಲಕ ಆಗಮಿಸಿದ್ದರು. ಅವರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಒಟ್ಟು 21 ಜನರು ಕೋವಿಡ್‌-19 ಸೋಂಕಿತರೆಂದು ಪಂಚಕುಲ ಮುಖ್ಯ ಆರೋಗ್ಯ ಅಧಿಕಾರಿ ಡಾ. ಜಸ್‌ಜೀತ್‌ ಕೌರ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, 'ಮೇ 19ರಂದು ಅಮೆರಿಕದಿಂದ 73 ಜನರು ಪಂಚಕುಲಕ್ಕೆ ಆಗಮಿಸಿದ್ದರು. ಅವರಲ್ಲಿ 21 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರು ಪಂಚಕುಲಕ್ಕೆ ಸೇರಿದವರಲ್ಲ. ಅವರೆಲ್ಲರೂ ಹರಿಯಾಣದ ಬೇರೆಬೇರೆ ಜಿಲ್ಲೆಗಳ ನಿವಾಸಿಗಳು. ಇನ್ನೂ ಎರಡು ಪ್ರಕರಣಗಳು ವರದಿಗಳು ಬರಬೇಕಿದೆ' ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.