ADVERTISEMENT

ದೇಶದ ಅತ್ಯಂತ ಸುರಕ್ಷಿತ ನಗರ ಕೋಲ್ಕತ್ತ: ಎನ್‌ಸಿಆರ್‌ಬಿ ವರದಿ

ಪಿಟಿಐ
Published 5 ಡಿಸೆಂಬರ್ 2023, 11:05 IST
Last Updated 5 ಡಿಸೆಂಬರ್ 2023, 11:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತ ನಗರವು ಸತತ ಮೂರನೇ ವರ್ಷವೂ ಭಾರತದ ಅತ್ಯಂತ ಸುರಕ್ಷಿತ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಮಹಾನಗರಗಳಲ್ಲಿನ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ವರದಿಯಾಗುವ ಸರಾಸರಿ ಅಪರಾಧ ಪ್ರಕರಣಗಳನ್ನು ಪರಿಗಣಿಸಿ ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (ಎನ್‌ಸಿಆರ್‌ಬಿ) ಈ ವರದಿ ಪ್ರಕಟಿಸಿದೆ.

20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 19 ನಗರಗಳಲ್ಲಿನ ಅಪರಾಧ ಪ್ರಕರಣಗಳನ್ನು ಪರಿಗಣಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಂತೆ, ಸುರಕ್ಷಿತ ನಗರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ಕೋಲ್ಕತ್ತದಲ್ಲಿ 2022ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 86.5 ಪ್ರಕರಣಗಳು ವರದಿಯಾಗಿವೆ. ಪುಣೆ (280.7) ಮತ್ತು ಹೈದರಾಬಾದ್‌ (299.2) ನಗರಗಳು ನಂತರದ ಸ್ಥಾನಗಳಲ್ಲಿವೆ.

ADVERTISEMENT

ಎನ್‌ಸಿಆರ್‌ಬಿ ವರದಿ ಪ್ರಕಾರ, ಕೋಲ್ಕತ್ತದಲ್ಲಿ ವರದಿಯಾಗುವ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿವೆ. ಇಲ್ಲಿ 2021ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಸರಾಸರಿ 103.4 ಪ್ರಕರಣಗಳು ವರದಿಯಾಗಿದ್ದವು. 2020ರಲ್ಲಿ ಸರಾಸರಿ 129.5 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ ಪುಣೆ ಹಾಗೂ ಹೈದರಾಬಾದ್‌ ನಗರಗಳಲ್ಲಿ ಕ್ರಮವಾಗಿ 256.8 ಮತ್ತು 259.9 ಪ್ರಕರಣಗಳು ವರದಿಯಾಗಿದ್ದವು. 

ಮಹಿಳೆಯರ ವಿರುದ್ಧದ ಅಪರಾಧ: ಕೋಲ್ಕತ್ತ ಮುಂದು
ಕೋಲ್ಕತ್ತದಲ್ಲಿ ಒಟ್ಟಾರೆ ಅಪರಾಧ ಪ್ರಕರಣಗಳ ಸಂಖ್ಯೆ ಇಳಿದಿವೆಯಾದರೂ, ಮಹಿಳೆಯರ ವಿರುದ್ಧದ ಪ್ರಕರಣಗಳು ಅಧಿಕಗೊಂಡಿವೆ. ಚೆನ್ನೈ ಮತ್ತು ಕೊಯಮತ್ತೂರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿವೆ.

ಕೋಲ್ಕತ್ತದಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧಗಳಿಗೆ ಸಂಬಂಧಿಸಿದ 1,783 ಪ್ರಕರಣಗಳು 2021ರಲ್ಲಿ ವರದಿಯಾಗಿದ್ದವು. ಆ ಸಂಖ್ಯೆ 2022ರಲ್ಲಿ 1,890ಕ್ಕೆ ಏರಿದೆ. ಇಲ್ಲಿನ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 27.1 ಪ್ರಕರಣಗಳು ಬೆಳಕಿಗೆ ಬಂದಿವೆ. ಚೆನ್ನೈನಲ್ಲಿ ಸರಾಸರಿ 17.1 ಮತ್ತು ಕೊಯಮತ್ತೂರಿನಲ್ಲಿ ಸರಾಸರಿ 12.9 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.