ADVERTISEMENT

ನೀಟ್ ರದ್ದಿನ ಬಗ್ಗೆ ಸ್ಪಷ್ಟನೆ ನೀಡಿ: ತ.‌ನಾಡು‌ ಸರ್ಕಾರಕ್ಕೆ ಪಳನಿಸ್ವಾಮಿ ಆಗ್ರಹ

ಪಿಟಿಐ
Published 3 ಮಾರ್ಚ್ 2025, 10:19 IST
Last Updated 3 ಮಾರ್ಚ್ 2025, 10:19 IST
<div class="paragraphs"><p>ಎಡಪ್ಪಾಡಿ ಪಳನಿಸ್ವಾಮಿ</p></div>

ಎಡಪ್ಪಾಡಿ ಪಳನಿಸ್ವಾಮಿ

   

ಚೆನ್ನೈ: ನೀಟ್‌ ರದ್ದುಗೊಳಿಸುವುದರ 'ರಹಸ್ಯ'ವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಸ್ಪಷ್ಟಪಡಿಸಬೇಕು ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಅಪ್ಪ, ಮಗ ನೀಟ್ ರಹಸ್ಯವನ್ನು ತಕ್ಷಣ ಬಹಿರಂಗಪಡಿಸಬೇಕು. ಹಾಗೆ ಮಾಡದಿದ್ದರೆ, ಡಿಎಂಕೆ ಸುಳ್ಳು ಹೇಳಿದೆ ಎಂಬ ಸತ್ಯವನ್ನು ಅವರು ಒಪ್ಪಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ನೀಟ್ ರದ್ದು ಮಾಡಲಾಗುವುದು ಎನ್ನುವ ಸುಳ್ಳು ಭರವಸೆಗಳನ್ನು ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳನ್ನು ಗೊಂದಲದಲ್ಲಿ ಇರಿಸಲಾಗಿದೆ. ಆಡಳಿತ ಪಕ್ಷವು ತನ್ನ ನೀಟ್‌ ರಹಸ್ಯವನ್ನು ಬಹಿರಂಗಪಡಿಸಿಲ್ಲ ಎಂದು ಪಳನಿಸ್ವಾಮಿ ದೂಷಿಸಿದ್ದಾರೆ.

ನೀಟ್ ಸಂಬಂಧಿತ ವಿದ್ಯಾರ್ಥಿಗಳ ಸಾವುಗಳನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

2021ರ ವಿಧಾನಸಭಾ ಚುನಾವಣೆಗೂ ಮುನ್ನ, ಡಿಎಂಕೆ ನೀಟ್ ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಡಿಎಂಕೆ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಪರೀಕ್ಷೆಯನ್ನು ರದ್ದುಗೊಳಿಸುವ ರಹಸ್ಯ ತಮ್ಮ ಪಕ್ಷಕ್ಕೆ ತಿಳಿದಿದೆ ಎಂದು ಹೇಳಿದ್ದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.