ADVERTISEMENT

ತಮಿಳುನಾಡಿನಲ್ಲಿ ‘ಫೆಂಗಲ್‌’ ಚಂಡಮಾರುತ ಭೀತಿ: ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ

ಪಿಟಿಐ
Published 28 ನವೆಂಬರ್ 2024, 4:51 IST
Last Updated 28 ನವೆಂಬರ್ 2024, 4:51 IST
   

ಚೆನ್ನೈ: ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ‘ಫೆಂಗಲ್’ ಚಂಡಮಾರುತ ಮುಂದಿನ 12 ಗಂಟೆಗಳಲ್ಲಿ ಕರಾವಳಿ ಅಪ್ಪಳಿಸಲಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಗುರುವಾರ ತಿಳಿಸಿದೆ.

ನವೆಂಬರ್‌ 30ರಂದು ಈ ಚಂಡಮಾರುತ ಗಂಟೆಗೆ 60–70 ಕೀ.ಮೀ ವೇಗದಲ್ಲಿ ಕರೈಕಲ್-ಮಹಾಬಲಿಪುರಂ ದಾಟಿ ಶ್ರೀಲಂಕಾ ಕರಾವಳಿ ಅಪ್ಪಳಿಸಲಿದೆ ಎಂದು ಹವಾಮಾನ ಕೇಂದ್ರ ಹೇಳಿದೆ.

ಸದ್ಯ ಸ್ಥಿರಗೊಂಡಿರುವ ಈ ಚಂಡಮಾರುತದ ಪರಿಣಾಮ ಚೆನ್ನೈ ಕರಾವಳಿ, ಪುದುಚೇರಿ, ನಾಗಪಟ್ಟಣಂ, ಕರೈಕಲ್, ಮಹಾಬಲಿಪುರಂ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ. 

ADVERTISEMENT

ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯಕ್ಕೆ ಈ ಚಂಡಮಾರುತದ ಪ್ರಭಾವ ತೀರಾ ಕಡಿಮೆ ಎಂದು ಕರ್ನಾಟಕದ ಹವಾಮಾನ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.