ಎಎಪಿ ಪ್ರಚಾರ ಗೀತೆ ಬಿಡುಗಡೆ
ನವದೆಹಲಿ: ದೆಹಲಿ ವಿಧಾಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಆಮ್ ಆದ್ಮಿ ಪಕ್ಷದ(ಎಎಪಿ) ಪ್ರಚಾರ ಗೀತೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
‘ಫಿರ್ ಲಾಯೆಂಗೆ ಕೇಜ್ರಿವಾಲ್’ (ಕೇಜ್ರಿವಾಲ್ ಅವರನ್ನು ಮತ್ತೆ ಕರೆತರುತ್ತೇವೆ) ಹೆಸರಿನ ಗೀತೆಯನ್ನು ಮಂಗಳವಾರ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಬಿಡುಗಡೆ ಮಾಡಿದರು.
‘ಇಡೀ ದೇಶ ಆಮ್ ಆದ್ಮಿ ಪಕ್ಷದ ಪ್ರಚಾರ ಗೀತೆಗಾಗಿ ಕಾಯುತ್ತಿದೆ. ಇಂದು ನಾನು ಈ ಹಾಡನ್ನು ದೆಹಲಿ ಮತ್ತು ದೇಶದ ಜನತೆಗೆ ಅರ್ಪಿಸುತ್ತಿದ್ದೇನೆ’ ಎಂದು ಕೇಜ್ರಿವಾಲ್ ಕಾರ್ಯಕ್ರಮದಲ್ಲಿ ಹೇಳಿದರು.
ಈ ಕುರಿತು ಎಎಪಿ ಸಂಸದ ಸಂಜಯ್ ಸಿಂಗ್ ಮಾತನಾಡಿ, ‘ಈ ಗೀತೆ ಖಂಡಿತಾವಗಿಯೂ ಯಶಸ್ಸು ಕಾಣಲಿದೆ. ನಮ್ಮ ಘೋಷಣೆ ಮತ್ತು ಈ ಗೀತೆ ಕೇಜ್ರಿವಲ್ ಅವರನ್ನು ಮರು ಆಯ್ಕೆ ಮಾಡುವ ಧ್ಯೇಯವನ್ನೇ ಹೊಂದಿದೆ. ಈ ಗೀತೆ ಪ್ರತಿ ಮನೆ ಮತ್ತು ಪ್ರತಿಯೊಬ್ಬರನ್ನು ತಲುಪಿ, ಬಹುಮತದಲ್ಲಿ ಕೇಜ್ರಿವಾಲ್ ಜಯ ಸಾಧಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.